September 20, 2024

ಬೆಳ್ತಂಗಡಿ: ಗ್ರಾಮ ಪಂಚಾಯತ್ ಅಧ್ಯಕ್ಷೆಯಿಂದ ರಸ್ತೆಯಲ್ಲಿ ಅಡಿಕೆ ಗುಂಡಿ : ದಿಗ್ಭಂಧನಗೊಳಗಾದ ಆದಿವಾಸಿಗಳು

0

ಮಲೆಕುಡಿಯ ಸಮುದಾಯದ ಕುಟುಂಬವೊಂದು ಕಳೆದ 75 ವರ್ಷಗಳಿಂದಲ್ಲೂ ಹೆಚ್ಚು ಕಾಲ ಉಪಯೋಗಿಸುತ್ತಿದ್ದ ಗ್ರಾಮ ಪಂಚಾಯತ್ ರಸ್ತೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಡಿಕೆ ಗಿಡ ನೆಟ್ಟು ಮಲೆಕುಡಿಯ ಸಮುದಾಯಕ್ಕೆ ಧಿಗ್ಬಂಧನ ವಿಧಿಸಿದ ಅಮಾನವೀಯ ಘಟನೆ ನೆರಿಯ ಗ್ರಾಮದಿಂದ ವರದಿಯಾಗಿದೆ.

ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿಂದ ಹಾದುಹೋಗುವ ಗ್ರಾಮ ಪಂಚಾಯತ್ ರಸ್ತೆಯನ್ನು ಮುಚ್ಚಿ ಮಲೆಕುಡಿಯ ಸಮುದಾಯಕ್ಕೆ ಮೂಲಭೂತ ಹಕ್ಕನ್ನು ನಿರಾಕರಣೆ ಮಾಡಿದ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ವಸಂತಿ ಕುಮಾರಿ ಎಂದು ಗುರುತಿಸಲಾಗಿದೆ. ಗ್ರಾಮದ ಸ.ನಂ 186/1 ರಲ್ಲಿ 1 ಎಕರೆ ಜಾಗ ಮಲೆಕುಡಿಯ ಸಮುದಾಯದ ಕಮಲ ಎಂಬವರಿಗೆ 2016 ರಲ್ಲಿ ಮಂಜೂರು ಮಾಡಲಾಗಿದೆ . ಸರಿ ಸುಮಾರು 75 ವರ್ಷಗಳಿಂದಲೂ ಇಲ್ಲಿ ವಾಸ್ತವಿದ್ದು , ರಸ್ತೆ ಸಂಪರ್ಕ ಇತ್ತು. ಆದರೆ ಇದೀಗ ಏಕಾಏಕಿ ರಸ್ತೆ ಮುಚ್ಚುವ ಮೂಲಕ ಎರಡು ಮನೆಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷೆಯೊರ್ವರು ಗ್ರಾಮ ಪಂಚಾಯತ್ ರಸ್ತೆಯನ್ನೇ ಬಂದ್ ಮಾಡುವ ಮೂಲಕ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮಲೆಕುಡಿಯ ಸಮುದಾಯ ಆರೋಪಿಸಿದೆ. ರಸ್ತೆಯ ಉದ್ದಗಲಕ್ಕೂ ಅಡಿಕೆ ಗುಂಡಿ ತೋಡುವ ಮೂಲಕ ಅಮಾನವೀಯತೆ ಮೆರೆಯಲಾಗಿದೆ. ಈ ಬಗ್ಗೆ ಈಗಾಗಲೇ ಕಮಲ ಅವರ ಮಗ ಹರಿಪ್ರಸಾದ್ ಅವರು ಗ್ರಾಮ ಪಂಚಾಯತ್ ನಿಂದಿಡಿದು ಜಿಲ್ಲಾಡಳಿತಕ್ಕೂ , ಧರ್ಮಸ್ಥಳ ಪೋಲಿಸ್ ಠಾಣೆಗೂ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ . ಇದರಿಂದಾಗಿ ಎರಡು ಕುಟುಂಬಗಳು ತೊಂದರೆ ಅನುಭವಿಸುಂತಾಗಿದೆ.

Leave a Reply

Your email address will not be published. Required fields are marked *

error: Content is protected !!