March 24, 2026

ಅ.25ಕ್ಕೆ ಸೂರ್ಯಗ್ರಹಣ – ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಸೇವೆಯಿಲ್ಲ, ಮಧ್ಯಾಹ್ನದಿಂದ ದರ್ಶನಕ್ಕೂ ನಿರ್ಬಂಧ

0
IMG-20221020-WA0015.jpg

ಈ ವರ್ಷದ ಕೊನೆಯ ಗ್ರಹಣವಾದ ಸೂರ್ಯಗ್ರಹಣ ಅ.25ರಂದು ಇರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಅನ್ನದಾನ ಸೇರಿದಂತೆ ಯಾವುದೇ ಸೇವೆಗಳು ಜರಗುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 25ರಂದು ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿದುಬಂದಿದೆ.

ಮರುದಿನ ಬೆಳಿಗ್ಗೆ ಕೂಡಾ ದೇವರ ನಿತ್ಯದ ಪೂಜೆಯ ಸಮಯದಲ್ಲಿ ಕೂಡಾ ವ್ಯತ್ಯಾಸವಾಗುವುದರಿಂದ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಭಕ್ತರಿಗೆ ದೇವರ ದರ್ಶನ ಪಡೆಯಬಹುದು.

Leave a Reply

Your email address will not be published. Required fields are marked *

error: Content is protected !!