ಬಂಟ್ವಾಳ: ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ-ದಂಡ ವಸೂಲಿ
ಬಂಟ್ವಾಳದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅನೇಕ ಅಂಗಡಿಗಳ ಮೇಲೆ ಪುರಸಭಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲಕರಿಂದ ದಂಡ ವಸೂಲಿ ಮಾಡಿದ ಘಟನೆ ಗುರುವಾರ ನಡೆದಿದೆ.
ಬಡ್ಡಕಟ್ಟೆಯಿಂದ ಬಂಟ್ವಾಳ ಪೇಟೆವರೆಗೆ ಇರುವ ಪ್ರತಿ ಅಂಗಡಿಗಳಿಗೆ ನೋಟೀಸ್ ನೀಡಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದು, ಸರಕಾರ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ನಿಷೇಧದ ಅದೇಶ ಜಾರಿ ಮಾಡಿದ ಬಳಿಕ ಇನ್ನೂ ಕೂಡ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇನ್ನು ಅಂಗಡಿಗಳ ಮೇಲೆ ದಾಳಿ ನಡೆಸುವ ವೇಳೆ ಬಂಟ್ವಾಳ ಪುರಸಭಾ ಸಮುದಾಯ ಸಂಘಟಕಿ ಉಮಾವತಿ, ಪ್ರಥಮ ದರ್ಜೆ ಸಹಾಯಕ ರಝಾಕ್, ಪಂಪ್ ಅಪರೇಟರ್ ಮಂಜಪ್ಪ, ಕ್ಲರ್ಕ್ ಸುಶೀಲ ಮತ್ತು ಗುತ್ತಿಗೆ ಆಧಾರದ ಸಿಬ್ಬಂದಿಗಳು ಭಾಗವಹಿಸಿದ್ದರು.




