August 13, 2026

ಬಂಟ್ವಾಳ: ಲಾರಿ ಮತ್ತು ಪಿಕಪ್ ನಡುವೆ ಭೀಕರ ಅಪಘಾತ: ಮೂವರು ಗಂಭೀರ

0
image_editor_output_image1714220571-1666006263878

ಪುಂಜಾಲಕಟ್ಟೆ: ಲಾರಿ ಮತ್ತು ಪಿಕಪ್ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ, ಮೂವರು ಗಂಭೀರವಾಗಿ ಗಾಯಗೊಂಡು‌ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಯಲ್ಲಿ ನಡೆದಿದೆ.

ಪುಂಜಾಲಕಟ್ಟೆ ಪ್ರಗತಿ ಆಸ್ಪತ್ರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಪಘಾತ ಸಂಭವಿಸಿದ್ದು, ಪಿಕಪ್ ವಾಹನದಲ್ಲಿದ್ದ ಇಬ್ಬರು ಹಾಗೂ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ‌.
ಮಂಗಳೂರು ಕಡೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಲಾರಿ ಪುಂಜಾಲಕಟ್ಟೆ ಯಿಂದ ವಗ್ಗ ಕಡೆಗೆ ಹೋಗುವ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ವಾಹನದ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿದೆ..

ಪಿಕಪ್ ವಾಹನದಲ್ಲಿ ಚಾಲಕ ಮತ್ತು ಪ್ರಯಾಣಿಕ ಹಾಗೂ ಲಾರಿ ಚಾಲಕನ ಮಾಹಿತಿ ಸದ್ಯ ತಿಳಿದು ಬಂದಿಲ್ಲ.
ಸ್ಥಳ ಕ್ಕೆ ಪುಂಜಾಲಕಟ್ಟೆ ಪೋಲೀಸರು ಬೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!