August 13, 2026

ಪುತ್ತೂರು: ಕುಕ್ಕರ್ ಸ್ಫೋಟಗೊಂಡು ಮನೆಯ ಉಪಕರಣಗಳು ನಾಶ

0
image_editor_output_image513434610-1666008406467

ಪುತ್ತೂರು: ಈಶ್ವರಮಂಗಲ ಮನೆಯೊಂದರಲ್ಲಿ ನಿನ್ನೆ ರಾತ್ರಿ ಕುಕ್ಕರ್ ಸ್ಫೋಟಗೊಂಡು ಮನೆಯ ಗ್ಯಾಸ್ ಸ್ಟವ್ ಸೇರಿದಂತೆ ಇತರ ಉಪಕರಣಗಳು ಹಾನಿಗೊಂಡ ಘಟನೆ ವರದಿಯಾಗಿದೆ.

ಈಶ್ವರಮಂಗಲ ಬಾಸಿತ್ ಎಂಬುವವರು ಮನೆಯ ಗ್ಯಾಸ್ ಸ್ಟವ್ ನಲ್ಲಿ ನಿನ್ನೆ ರಾತ್ರಿ ಅಡುಗೆ ಪದಾರ್ಥ ಬೇಯಿಸುತ್ತಿದ್ದ ಸಂದರ್ಭ ಕುಕ್ಕರ್ ಏಕಾಏಕಿ ಸ್ಫೋಟ ಗೊಂಡಿದೆ.
ಕೆಲವೇ ನಿಮಿಷಗಳ ಮೊದಲು ಅಡುಗೆ ಕೋಣೆಯಲ್ಲಿದ್ದ ಮಹಿಳೆಯರು ಬೇರೆ ಕೋಣೆಗೆ ಹೋದ ಸಂದರ್ಭ ಈ ಘಟನೆ ಸಂಭವಿಸಿದ್ದು ಹೆಚ್ಚಿನ ಅನಾಹುತದಿಂದ ತಪ್ಪಿದಂತಾಗಿದೆ.

ಘಟನೆಯಿಂದ ಗ್ಯಾಸ್ ಸ್ಟವ್, ಮತ್ತು ಪಕ್ಕದಲ್ಲಿದ್ದ ಇನ್ನಿತರ ಕೆಲವು ಸಾಮಾಗ್ರಿಗಳು ಹಾನಿಗೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!