March 23, 2026

ಪುತ್ತೂರು: ಉದ್ಯಮಿ ಯುವಕ ಆತ್ಮಹತ್ಯೆ

0
Screenshot_20221008-123209_WhatsAppBusiness.jpg

ಪುತ್ತೂರು: ಕಲ್ಲೇಗ ಮಸೀದಿ ಬಳಿ ಕಾರ್ಯಚರಿಸುತ್ತಿರುವ “ಜಾಕಿ ಗ್ರೂಪ್ಸ್” ಸಂಸ್ಥೆಯ ಮಾಲಕ ಆಫಕ್ (37) ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನೆಹರುನಗರದ ಕಲ್ಲೇಗ ಮಸೀದಿ ಬಳಿಯ ಕೆಜೆಎಂ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿರುವ ಸ್ಲೀಪ್ ವೆಲ್ ಮ್ಯಾಟ್ರೇಸ್, ಡಿಸೈನರ್ ವಾಲ್ ಪೇಪರ್ಸ್, ಕರ್ಟನ್ಸ್, ಬೆಡ್ಡಿಂಗ್, ಇಂಟಿರಿಯರ್ ಮುಂತಾದ ಗೃಹೋಪಯೋಗಿ ವಸ್ತುಗಳ ಮಳಿಗೆ “ಜಾಕಿ ಗ್ರೂಪ್ಸ್” ಮಾಲಕ, ಬನ್ನೂರು ನಿವಾಸಿ ಆಫಕ್ ರವರು ಕೆಜೆಎಂ ಬಿಲ್ಡಿಂಗ್ ನ ಮೊದಲನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಆಫಕ್ ರವರು ವಿವಾಹಿತರಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ., ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಹಲವು ಮಂದಿ ಜಮಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!