ಪಾಕಿಸ್ತಾನದ ಗಡಿ ತಲುಪಿದ ಶಿಹಾಬ್ ಚೊಟ್ಟೂರು: ಪಾಕಿಸ್ತಾನದ ನೆಲದಲ್ಲಿ ಹೆಜ್ಜೆ ಹಾಕಲು ಪಾಕ್ ವಿಸಾ ನಿರಾಕರಣೆ ಮಾಡಿಲ್ಲ, ಈ ಆರೋಪ ಶುದ್ಧ ಸುಳ್ಳು: ಶಿಹಾಬ್ ಚೆಟ್ಟೂರು ಸ್ಪಷ್ಟನೆ
ಪಂಜಾಬ್: ನಾನು ಪಂಜಾಬ್ -ಪಾಕಿಸ್ತಾನ ಗಡಿ ತಲುಪಿದ್ದೇನೆ. ನನ್ನ ಈ ಪಾದಯಾತ್ರೆಗೆ ಪಾಕಿಸ್ತಾನ ಸರಕಾರ ವೀಸಾ ನಿರಾಕರಿಸಿದೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಶಿಹಾಬ್ ಚೆಟ್ಟೂರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರು ಶಿಹಾಬ್, ಖಾಸಗಿ ಯೂಟ್ಯೂಬ್ ಚಾನಲ್ ವೊಂದರಲ್ಲಿ ಮಾತನಾಡಿದ್ದಾರೆ.
ಇದರ ಲಿಂಕ್ ಇಲ್ಲಿದೆ…ಕ್ಲಿಕ್ ಮಾಡಿ
https://youtu.be/binczt_9Brs
ಕೇರಳದಿಂದ ಕಾಲ್ನಡಿಗೆ ಮೂಲಕ ಪವಿತ್ರ ಹಜ್ ಯಾತ್ರೆ ಹೊರಟಿರುವ ಶಿಹಾಬ್ ಚೊಟ್ಟೂರು ಪಾಕಿಸ್ಥಾನದ ಗಡಿ ತಲುಪಿದ್ದಾರೆ.
ಭಾರತದ ನೆಲದಲ್ಲಿ ಕಳೆದ 123 ದಿನಗಳಿಂದ ಸಾವಿರಾರು ಕಿ ಮೀ ಕಾಲ್ನಡಿಗೆಯಲ್ಲೇ ಯಾತ್ರೆ ನಡೆಸಿದ್ದಾರೆ. ಭಾರತದ ಮಣ್ಣಿನಲ್ಲಿ ಅವರು ನಡೆದಾಡುವ ವೇಳೆ ಅವರ ಜೊತೆ ಕೇರಳದಿಂದ ಕಾಶ್ಮೀರದ ತನಕ ಸಾವಿರಾರು ಮಂದಿ ಗೌರವಾಧರಗಳನ್ನು ನೀಡಿದ್ದಾರೆ.
ಅವರು ನಡೆದಾಡುವ ಎಲ್ಲಾ ರಾಜ್ಯಗಳಲ್ಲಿಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪೊಲೀಸ್ ರಕ್ಷಣೆಯೂ ದೊರಕಿದೆ. ಆದರೆ ಎಲ್ಲಾ ಗೌರವಗಳನ್ನು ಮುಡಿಗೇರಿಸಿ ಭಾರತದ ನೆಲದಿಂದ ಪಾಕಿಸ್ಥಾನದ ನೆಲದಲ್ಲಿ ಅವರು ಹೆಜ್ಜೆ ಹಾಕಲು ಪಾಕ್ ವಿಸಾ ನಿರಾಕರಣೆ ಮಾಡಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.. ಶಿಹಾಬ್ ಅವರು ಮಾತನಾಡಿರುವ ಸಂಪೂರ್ಣ ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು





