ಮಂಗಳೂರು: ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು
ಮಂಗಳೂರು: ನಗರದ ಬಿಜೈ ನ್ಯೂ ರೋಡ್ ಸಮೀಪದ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬುಧವಾರ ನಡೆದಿದೆ.
ಮಂಜುಳಾ ಎಂಬವರು ಬುಧವಾರ ಬೆಳಗ್ಗೆ 10.30ಕ್ಕೆ ಬೀಗ ಹಾಕಿ ಹೊರಗಡೆ ಹೋಗಿದ್ದು, ಮಧ್ಯಾಹ್ನ 12.30ಕ್ಕೆ ಹಿಂತಿರುಗಿದ್ದರು. ಮುಂಬಾಗಿಲನ್ನು ತೆರೆದು ಒಳಗಡೆ ಹೋದಾಗ ಮನೆಯ ಹಿಂಬದಿಯ ಬಾಗಿಲು ತೆರೆದುಕೊಂಡಿತ್ತು.ಈ ವೇಳೆ ಕಳ್ಳತನವಾದ ಘಟನೆ ಬೆಳಕಿಗೆ ಬಂದಿದೆ.
ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದ ಕಳ್ಳರು ಬೆಡ್ರೂಮ್ನ ಕಪಾಟಿನ ಲಾಕರ್ನಲ್ಲಿದ್ದ 28 ಗ್ರಾಂನ 1 ಬಳೆ, 40 ಗ್ರಾಂ ಮತ್ತು 8 ಗ್ರಾಂನ ಸರಗಳು, 1 ಗ್ರಾಂನ 1 ಜತೆ ಕಿವಿಯೋಲೆ ಸಹಿತ ಸುಮಾರು 4 ಲ.ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.