March 24, 2026

ಉಡುಪಿಯಲ್ಲಿ ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆ: 11 ಮಂದಿ PFI ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

0
image_editor_output_image1939602764-1663924290924.jpg

ಉಡುಪಿ: ಉಡುಪಿಯಲ್ಲಿ ಎನ್ ಐ ಎ ದಾಳಿ ಖಂಡಿಸಿ, ಪೂರ್ವಾನುಮತಿ ಪಡೆಯದೇ ಸೆ.22ರ ಗುರುವಾರ ರಸ್ತೆ ತಡೆ ಮಾಡಿದ ಪಿ ಎಫ್ ಐ ನ 11 ಮಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಗುರುವಾರದಂದು ಉಡುಪಿಯ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡಿದ್ದರು. ಅಲ್ಲದೆ ಗುಂಪನ್ನು ಚದುರಿಸಲು ನಗರದ ಪೊಲೀಸ್ ರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು

ಪ್ರತಿಭಟನೆಯಲ್ಲಿ ನಡೆಸಿದ್ದ ಸಾದೀಕ್‌ ಅಹಮ್ಮದ್‌(40), ಅಫ್ರೋಜ್‌ಕೆ (39), ಇಲಿಯಾಸ್‌ ಸಾಹೇಬ್‌(46),ಇರ್ಷಾದ್‌(37), ಫಯಾಜ್‌ ಅಹಮ್ಮದ್‌(39), ಮಹಮ್ಮದ್‌ ಅಶ್ರಫ್‌(43), ಎ. ಹಾರೂನ್‌ ರಶೀದ್‌, ಮೊಹಮ್ಮದ್‌ ಜುರೈಜ್‌ (42), ಇಶಾಕ್‌ ಕಿದ್ವಾಯಿ (30), ಶೌಕತ್‌ಅಲಿ (31), ಮಹಮ್ಮದ್‌ ಝಹೀದ್‌ (24) ಇವರನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಕಲಂ: 143, 147, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

Leave a Reply

Your email address will not be published. Required fields are marked *

error: Content is protected !!