March 24, 2026

ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

0
IMG-20220923-WA0039

ವಿಟ್ಲ: ಲಯನ್ಸ್ ಕ್ಲಬ್, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಉದ್ಘಾಟಿಸಿದರು. ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವಶ್ವೇರ ಭಟ್ ಕೆ.ವಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.‌

ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ವೇದವತಿ, ವಿಟ್ಲ ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ರವಿಶಂಕರ್, ಕೆಎಂಸಿ ಆಸ್ಪತ್ರೆಯ ಡಾ.ಮನೋಜ್, ಡಾ. ಸೇರಾ, ವಿಟ್ಲದ ವೈದ್ಯಾಧಿಕಾರಿ ಡಾ.ಆಶಿತಾ, ಡಾ. ಅಶೋಕ್ ಕುಮಾರ್ ರೈ, ಲಯನ್ಸ್ ಕ್ಲಬ್ ಸಂತೋಷ್ ಕುಮಾರ್ ಶೆಟ್ಟಿ, ಲೂಹಿಸ್ ಮಸ್ಕರೇಂಞಸ್, ಅರವಿಂದ ರೈ ಮೂರ್ಜೆಬೆಟ್ಟು, ಶಿವಪ್ರಸಾದ್ , ಮಹಮ್ಮದ್ ಹನೀಫ್, ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮಾ ಸ್ವಾಗತಿದರು. ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಇಂದಿರಾ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!