March 24, 2026

ಮಂಗಳೂರಿಂದ ದುಬಾೖಗೆ ದಿನಂಪ್ರತಿ ವಿಮಾನ ಸಂಚಾರ ಆರಂಭ: ವೇಳಾಪಟ್ಟಿ ಬಿಡುಗಡೆ

0
image_editor_output_image466062482-1663740141259.jpg

ಮಂಗಳೂರು : ಮಂಗಳೂರು ವಿಮಾನನಿಲ್ದಾಣ ದಿಂದ ಅ. 30ರಿಂದ ಬೆಂಗಳೂರಿಗೆ ಮುಂಜಾನೆ ಹಾಗೂ ದುಬಾೖಗೆ ದಿನಂಪ್ರತಿ ವಿಮಾನ ಸಂಚಾರ ಆರಂಭಗೊಳ್ಳಲಿದೆ.

ಚಳಿಗಾಲದ ವೇಳಾಪಟ್ಟಿಯಂತೆ ಮಂಗಳೂರಿನಿಂದ ಇಂಡಿಗೋ ವಿಮಾನ ಬೆಂಗಳೂರಿಗೆ ಬೆಳಗ್ಗೆ 11ರ ಬದಲಿಗೆ ಮುಂಜಾನೆ 6.40ಕ್ಕೆ ವಿಮಾನ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಪ್ರಥಮ ವಿಮಾನ ಬೆಳಗ್ಗೆ 8.10ಕ್ಕೆ ಮಂಗಳೂರಿಗೆ ಆಗಮಿಸಲಿದ್ದು 8.45ಕ್ಕೆ ಪೂನಾಕ್ಕೆ ನಿರ್ಗಮಿಸಲಿದೆ.

ಡುಗಡರ ಚಳಿಗಾಲದ ವೇಳಾಪಟ್ಟಿಯಂತೆ ಮಂಗಳೂರಿನಿಂದ ಪೂನಾಕ್ಕೆ ಬೆಳಗ್ಗಿನ ಜಾವ 3.20ಕ್ಕೆ ಹೊರಡಲಿದ್ದರೆ ದುಬಾೖಗೆ ಪ್ರತಿದಿನ ಬೆಳಗ್ಗೆ 8.25ಕ್ಕೆ ವಿಮಾನ ಸಂಚರಿಸಲಿದೆ. ಪ್ರಸ್ತುತ ಎರಡು ದಿನಕ್ಕೊಮ್ಮೆ ದುಬಾೖಗೆ ವಿಮಾನ ಸಂಚಾರವಿದೆ.

ಇಂಡಿಗೋ ಹಾಗೂ ಸ್ಪೈಸ್‌ಜೆಟ್‌ ಕೂಡ ದೋಹಾ ಹಾಗೂ ಶಾರ್ಜಾಕ್ಕೆ ಚಳಿಗಾಲದ ವೇಳಾಪಟ್ಟಿಯಲ್ಲಿ ವಿಮಾನಸಂಚಾರ ಆರಂಭಿಸುವ ಸೂಚನೆ ನೀಡಿದ್ದು ಬುಕ್ಕಿಂಗ್‌ ಇನ್ನಷ್ಟೆ ಆರಂಭಗೊಳ್ಳಬೇಕಾಗಿದೆ.

ಚಳಿಗಾಲದ ಹೊಸ ವೇಳಾಪಟ್ಟಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ತಮ್ಮ ಅನುಕೂಲ ತಕ್ಕ ರೀತಿಯಲ್ಲಿ ಸಂಚರಿಸಲು ಪೂರಕವಾಗಲಿದೆ.

Leave a Reply

Your email address will not be published. Required fields are marked *

error: Content is protected !!