August 12, 2026

ಪಡುಬಿದ್ರಿ: ಮೀನಿನ ಟೆಂಪೋ ಪಲ್ಟಿ: ಚಾಲಕನಿಗೆ ಗಾಯ

0
image_editor_output_image1671608367-1663663620658.jpg

ಪಡುಬಿದ್ರಿ: ರಾಷ್ಟ್ರಿಯ ಹೆದ್ದಾರಿ 66ರ ಭವ್ಯ ಪೆಟ್ರೋಲ್ ಪಂಪ್ ಎದುರು ಚಾಲಕನ ನಿಯಂತ್ರಣ ತಪ್ಪಿದ ಮೀನಿನ ಟೆಂಪೋ ರಸ್ತೆಯಲ್ಲಿ ಮಗುಚಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ಮಲ್ಪೆಯಿಂದ ಮಂಗಳೂರು ಕಡೆ ಗೊಬ್ಬರದ ಮೀನನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ.

ಟೆಂಪೋ ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಹೆಜಮಾಡಿ ಟೋಲ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹೆದ್ದಾರಿಯಿಂದ ವಾಹನವನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಆನುವು ಮಾಡಿದ್ದಾರೆ.

ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ರವರು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!