ಉಜಿರೆ: ಹಾಸಿಗೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್, ದಾಸ್ತಾನು ಇರಿಸಿದ್ದ ಹತ್ತಿಗೆ ಬೆಂಕಿ
ಉಜಿರೆ: ಇಲ್ಲಿನ ಮುಖ್ಯ ಪೇಟೆಯ ಚಾರ್ಮಾಡಿ ರಸ್ತೆಯಲ್ಲಿರುವ ಹಾಸಿಗೆ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ದಾಸ್ತಾನು ಇರಿಸಿದ್ದ ಹತ್ತಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ.
ಈ ಪರಿಣಾಮ ಅಂಗಡಿ ಸಮೀಪದ ತರಕಾರಿ, ಮೊಬೈಲ್, ಜ್ಯೂಸ್ ಹಾಗೂ ಬಟ್ಟೆ ಅಂಗಡಿಗಳಿಗೆ ಬೆಂಕಿ ಆವರಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತು ನಾಶವಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ.




