March 26, 2026

ಬೀದಿ ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದು ವಿಕೃತಿ ಮೆರೆದ ವೈದ್ಯ: ವಿಡಿಯೋ ವೈರಲ್

0
image_editor_output_image-358406267-1663562760717.jpg

ರಾಜಸ್ಥಾನ : ನಾಯಿಯ ಬಾಯಿಗೆ ಬಟ್ಟೆ ಕಟ್ಟಿ ಅದನ್ನು ಕಾರಿಗೆ ಕಟ್ಟಿದ ಚಾಲಕ ನಗರ ತುಂಬೆಲ್ಲಾ ಎಳೆದೊಯ್ದು ವಿಕೃತಿ ಮೆರೆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಘಟನೆ ನಡೆದಿದ್ದು ರಾಜಸ್ಥಾನದ ಜೋಧ್ ಪುರದಲ್ಲಿ.

ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ನಾಯಿಯನ್ನು ಕಾರಿಗೆ ಕಟ್ಟಿ ಹಿಂಸೆ ನೀಡಿದ ಘಟನೆ ಸಾಕಷ್ಟು ನೋಡಿದ್ದೇವೆ ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜೀವ ಕಾಪಾಡಬೇಕಾದ ವೈದ್ಯ ನಾಯಿಯನ್ನು ಈ ರೀತಿಯಾಗಿ ಕಾರಿಗೆ ಕಟ್ಟಿ ಹಿಂಸೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಅಂದ ಹಾಗೆ ವಿಕೃತಿ ಮೆರೆದ ವೈದ್ಯನ ಹೆಸರು ಡಾ.ರಜನೀಶ್ ಗಾಲ್ವಾ ಎನ್ನಲಾಗಿದೆ.

ವಿಡಿಯೋದಲ್ಲಿ ಕಾಣುವಂತೆ, ನಾಯಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ತನ್ನ ಕಾರಿಗೆ ಕಟ್ಟಿ ಎಳೆದೊಯ್ಯುವ ವಿಡಿಯೋ ಕಾಣಬಹುದು.

ಈ ವಿಡಿಯೋವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು ಅಲ್ಲದೆ ಅದನ್ನು ಕಂಡ ಕೆಲವರು ಶ್ವಾನದ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ವೈದ್ಯ ಮಾತ್ರ ಕಾರು ನಿಲ್ಲಿಸದೆ ಮುಂದೆ ಚಲಿಸಿದ್ದಾನೆ ಆದರೆ ಸಾರ್ವಜನಿಕರು ಮತ್ತೆ ಕಾರನ್ನು ಅಡ್ಡಕಟ್ಟಿ ಶ್ವಾನದ ರಕ್ಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!