March 23, 2026

ಕಾರ್ಕಳ: ಖಾಸಗಿ ಬಸ್, ಪಿಕಪ್ ಮುಖಾಮುಖಿ ಢಿಕ್ಕಿ: ಪಿಕಪ್ ಚಾಲಕ ಸಾವು

0
image_editor_output_image-1762790452-1663041529853.jpg

ಕಾರ್ಕಳ : ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಢಿಕ್ಕಿ ಹೊಡೆದು ಪಿಕಪ್ ಚಾಲಕ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೆ.12 ರ ರಾತ್ರಿ 9.15 ಕ್ಕೆ ನಡೆದಿದೆ.

ಪಿಕ್ ಅಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್ ಸಾವಿಗೀಡಾದವರು.

ಹೆಬ್ರಿಯಿಂದ ಬೆಂಗಳೂರಿಗೆ ಹೋಗುತಿದ್ದ ಬಸ್ , ಹಿರ್ಗಾನದಿಂದ ನೆಲ್ಲಿಕಟ್ಟೆ ಕಡೆಗೆ ಬರುತಿದ್ದ ಪಿಕ್ ಅಪ್ ಮುಖಮುಖಿ ಡಿಕ್ಕಿ ಹೊಡೆದಿದೆ.

ಬಸ್ ಚಾಲಕ ವೇಗವಾಗಿ ಚಾಲನೆಯೇ ಅವಘಡ ಕ್ಕೆ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!