March 23, 2026

ಹೆಸ್ಕಾಂ ಕಚೇರಿ ಆವರಣದಲ್ಲೇ ಗುತ್ತಿಗೆ ನೌಕರ ನೇಣುಬಿಗಿದು ಆತ್ಮಹತ್ಯೆ

0
image_editor_output_image208344095-1662984590263.jpg

ಅಥಣಿ (ಬೆಳಗಾವಿ ಜಿಲ್ಲೆ): ಹೆಸ್ಕಾಂನ ಅಥಣಿ ಶಾಖೆ ಕಚೇರಿ ಆವರಣದಲ್ಲಿ ಸೋಮವಾರ ಗುತ್ತಿಗೆ ನೌಕರರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುನಾಥ ಗಂಗಪ್ಪ ಮುತ್ತಗಿ (30) ಸಾವಿಗೆ ಶರಣಾದವರು. ವಿದ್ಯುತ್‌ ಕಂಬಗಳಿಗೆ ನಿಲ್ಲಿಸುವ ಹೈದರ್‌ಗೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!