December 15, 2025

ಭಾರೀ ಮಳೆಗೆ ಸಿಲುಕಿ ವಿದ್ಯುತ್ ಸ್ಪರ್ಶ: ಯುವತಿ ಸಾವು

0
image_editor_output_image1607621038-1662443285883.jpg

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿದ ಯುವತಿಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ವೈಟ್ ಫೀಲ್ಡ್ ನ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರದ ಅಖಿಲಾ (23) ಮೃತ ಯುವತಿ. ಬಿಕಾಂ ಪದವೀಧರೆಯಾಗಿದ್ದ ಅಖಿಲಾ ಖಾಸಗಿ ಖಾಲೆಯೊಂದರ ಆಡಳಿತ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದರು.

ಎಂದಿನಂತೆ ನಿನ್ನೆ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಶಾಲೆಯಿಂದ ಹೊರಟಿದ್ದ ಅವರು ಮಳೆಯ ಕಾರಣದಿಂದಾಗಿ ಅಲ್ಲಲ್ಲಿ ವಾಹನ ನಿಲ್ಲಿಸಿ ಬರುತ್ತಿದ್ದರು. ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ.

ಈ ವೇಳೆ ಭಾರೀ ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದ ಅಖಿಲಾ ಅವರು ಸ್ಕೂಟರ್ ನೀರು ಹೆಚ್ಚಿದ್ದರಿಂದ ಇದ್ದಕ್ಕಿದ್ದಂತೆ ಆಫ್ ಆಗಿದೆ.

ಈ ವೇಳೆ ಕೆಳಗೆ ಬೀಳುತ್ತಿದ್ದ ಅಖಿಲಾ ಸಹಾಯಕ್ಕೆ ಬಲ ಭಾಗದಲ್ಲಿದ್ದ ವಿದ್ಯುತ್ ಕಂಬ ಹಿಡಿದುಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಕೆಳಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!