August 12, 2026

ಕೇಸರಿ ಕ್ಯಾಪ್ ಧರಿಸಿ ಪೊಲೀಸ್ ಠಾಣೆಯಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಮುಸ್ಲಿಂ ಎಸ್ಸೈ

0
image_editor_output_image-1128770069-1662097897466.jpg

ಹುಬ್ಬಳ್ಳಿ: ಜಿಲ್ಲೆಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜೆಎಂ ಕಲಿಮಿರ್ಚಿ, ಕೇಸರಿ ಕ್ಯಾಪ್ ಧರಿಸಿ  ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಪಿಎಸ್ ಐ ಕಲಿ ಮಿರ್ಚಿ, 2021 ರಲ್ಲಿ ಸಹ ಅವರು ತಮ್ಮ ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಾಗ ಮುಂಚೂಣಿಯಲ್ಲಿದ್ದರು.

“ನಾನು ಹುಟ್ಟಿನಿಂದ ಮುಸ್ಲಿಂ, ಆದರೆ ನಾನು ನನ್ನ ಮನೆಯಿಂದ ಹೊರಡುವಾಗ ನಾನು ಭಾರತೀಯನೇ ಮತ್ತು ಹೆಚ್ಚೇನೂ ಇಲ್ಲ. ನಾನು ಕೊಪ್ಪಳ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದಿದ್ದೇನೆ, ಅಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾರೆ.  ಪೊಲೀಸ್ ಕರ್ತವ್ಯ,ದ ವೇಳೆ ನಾನು ಹಲವು ಹಬ್ಬಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನನ್ನೂರಿನಲ್ಲಿ ನಡೆಯುವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಳ್ಳಲು  ಗ್ರಾಮಕ್ಕೆ ತಪ್ಪದೇ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!