ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟ: 54 ಸಾವಿರ ಶಿಕ್ಷಕರು ಪಾಸ್
ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ರಿಂದ 8ನೇ ತರಗತಿ ಬೋಧನೆಗಾಗಿ ಮೇ ತಿಂಗಳಿನಲ್ಲಿ ನಡೆಸಿದ ಪದವೀಧರ ಶಿಕ್ಷಕರ ನೇಮಕಾತಿ (ಜಿಪಿಟಿಆರ್-2022) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 54 ಸಾವಿರ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
15 ಸಾವಿರ ಹುದ್ದೆಗಳಿಗೆ 1,16,223 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 74,923 ಮಂದಿ ಹಾಜ ರಾಗಿದ್ದರು. ಈ ಪೈಕಿ 54,342 ಮಂದಿ ಅರ್ಹರಾಗಿದ್ದಾರೆ. ಅರ್ಹರಲ್ಲಿ “ರೋಸ್ಟರ್, ವಿಷಯವಾರು ಮತ್ತು ಜಿಲ್ಲಾ
ವಾರು’ ಮಾನದಂಡಗಳನ್ನು ಪರಿಗಣಿಸಿ 15 ಸಾವಿರ ಶಿಕ್ಷಕ ರನ್ನು ನೇಮಿಸಿಕೊಳ್ಳಲಾಗುತ್ತದೆ. ಮುಂದಿನ 2ರಿಂದ 3 ದಿನಗಳಲ್ಲಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಡಾ| ಆರ್. ವಿಶಾಲ್ ತಿಳಿಸಿದ್ದಾರೆ.




