February 4, 2026

ಪೊಲೀಸ್‌ ಹೆಡ್ ಕಾನ್ಸ್ ಟೇಬಲ್‌ಗೆ ಬೆದರಿಕೆ, ಹಲ್ಲೆ: ನಗರಸಭೆ ಕಾಂಗ್ರೆಸ್ ಸದಸ್ಯನ ವಿರುದ್ಧ ಎಫ್ಐಆರ್ ದಾಖಲು

0
image_editor_output_image-2013800998-1660714825582.jpg

ಹುಣಸೂರು: ಪೊಲೀಸ್‌ ಹೆಡ್ ಕಾನ್ಸ್ ಟೇಬಲ್‌ಗೆ ಬೆದರಿಕೆ ಮತ್ತು ಹಲ್ಲೆ ಮಾಡಿದ ಆರೋಪದಡಿ ಹುಣಸೂರು ನಗರಸಭೆ ಸದಸ್ಯನ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಸೂರು ನಗರಸಭೆ ಮೈದಾನದಲ್ಲಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರ ಮನವಿಯಂತೆ ಸಾರ್ವಜನಿಕರನ್ನು ಅಂಕಣದಿಂದ ಹೊರಗೆ ಹೋಗಲು ಹೆಡ್ ಕಾನ್ಸಟೇಬಲ್ ಮಹೇಶ್ ಹೇಳಿದ್ದರು.

ಈ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ಮಹೇಶ್ ಅವರು ಹುಣಸೂರು ನಗರಸಭೆಯ 17 ನೇ ವಾಡ್ ೯ ಸದಸ್ಯ ಮನುವನ್ನು ಕ್ರೀಡಾಂಗಣದಿಂದ ಹೊರ ಹೋಗಲು ಸೂಚಿಸಿದ್ದರು. ಈ ವೇಳೆ ಮನು ಏಕವಚನದಲ್ಲಿ ಕೂಗಾಡಿದ್ದ ನಂತರ ಮಹೇಶ್‌ರನ್ನು ಎಳೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ನಗರಸಭೆ ಸದಸ್ಯ ಮನು ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!