March 27, 2026

ಕಾಸರಗೋಡು: ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತು ಸಹಿತ ಇಬ್ಬರ ಬಂಧನ

0
n413194156166039944527258c8d85ad034a2621899d06c23b049c20191467be6735dd7adf5959750150daa.jpg

ಕಾಸರಗೋಡು: ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ 70 ಗ್ರಾಂ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಳಿಯತ್ತಡ್ಕ ರಹಮತ್ ನಗರದ ಆಹಮ್ಮದ್ ನಿಯಾಝ್ (38) ಮತ್ತು ಪತ್ತನಂತ್ತಿಟ್ಟ ಕೋಣಿಯ ಇಜಾಸ್ ಅಝೀಝ್ (25) ಬಂಧಿತ ಆರೋಪಿಗಳು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಿದ್ಯಾನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಪಟ್ಲ ಕುದ್ರೆ ಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಬೈಕ್ ಅನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿ‌ಲ್ಲಿಸದೇ, ಬೆನ್ನಟ್ಟಿದ್ದಾಗ ಬೈಕ್ ತೊರೆದು ಪರಾರಿಯಾಗಲೆತ್ನಿಸಿದಾಗ ಇಬ್ಬರನ್ನು ಬಂಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!