February 2, 2026

ಕಡಬ: ಆಟೋ ರಿಕ್ಷಾ ಹಾಗೂ ಟಾಟಾ ಏಸ್ ಗೂಡ್ಸ್ ವಾಹನ ನಡುವೆ ಅಪಘಾತ: ಆಟೋ ರಿಕ್ಷಾ ಚಾಲಕ ಗಂಭೀರ

0
IMG-20220708-WA0004.jpg

ಕಡಬ: ಆಟೋ ರಿಕ್ಷಾ ಹಾಗೂ ಟಾಟಾ ಏಸ್ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಪೆರಾಬೆ ಗ್ರಾಂ.ಪಂ ವ್ಯಾಪ್ತಿಯ ಎರ್ಮಾಳ ಎಂಬಲ್ಲಿ ನಡೆದಿದೆ.

ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಟಾಟಾ ಏಸ್ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಸಮೀಪದ ಎರ್ಮಾಳ ಎಂಬಲ್ಲಿ ಈ ಘಟನೆ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಅಪಘಾತದಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!