ಪುತ್ತೂರು: ವಿಮಾನಯಾನ ಕ್ಷೇತ್ರದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಮೆರುಗು: ಏವಿಯೇಶನ್ ಕ್ಷೇತ್ರದಲ್ಲಿ 20 ವಿದ್ಯಾರ್ಥಿಗಳಿಗೆ ಉದ್ಯೋಗ
ಪುತ್ತೂರು; ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ 20 ಮಂದಿ ವಿದ್ಯಾರ್ಥಿಗಳು ಏವಿಯೇಶನ್ ಕ್ಷೇತ್ರದಲ್ಲಿ ಉದ್ಯೋಗ ಪಡೆದು ವಿಮಾನಯಾನ ಕ್ಷೇತ್ರದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಮೆರುಗನ್ನು ಹೆಚ್ಚಿಸಿಕೊಂಡಿದ್ದಾರೆ.
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಗ್ರೌಂಡ್ ಆಪರೇಶನ್ ವಿಭಾಗದಲ್ಲಿ ಮೇಘ, ವರ್ಷಾ, ನಂದಿತಾ, ರೋಯಲ್ ವಾಲ್ಟ್ರನ್ಸ್ ನಲ್ಲಿ ಪ್ರಜ್ಞಾ, ಸೇಲ್ಸ್ ಆಂಡ್ ಬಿಸಿನೆಸ್ ಆಪರೇಶನ್ ವಿಭಾಗದಲ್ಲಿ ಮಹಮ್ಮದ್ ಜಾವದ್, ಗೋವಾ ಗೋಲ್ಡ್ ಫಿಂಚ್ ಸ್ಟಾರ್ ಹೋಟೆಲ್ ನಲ್ಲಿ ಪ್ರಂಟ್ ಆಫೀಸ್ ಆಗಿ ಕಾರ್ತೀಕ್, ಮಂಗಳೂರು ಸೀ ವ್ಯೂ ಸ್ಟಾರ್ ಹೋಟೆಲ್ ಪ್ರಂಟ್ ಆಫೀಸ್ ಆಗಿ ರಕ್ಷಿತಾ, ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಗ್ರೌಂಡ್ ಆಪರೇಷನ್ ಆಗಿ ಜೀವಿತಾ, ಬೆಂಗಳೂರು ಜೆ.ಡಬ್ಲ್ಯೂ ಸ್ಟಾರ್ ಪ್ರಾಪರ್ಟೀಸ್ ನ ಹಾಸ್ಪಿಟಾಲಿಟಿ ವಿಭಾಗದಲ್ಲಿ ಮೋಕ್ಷಿತಾ, ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಗೆಸ್ಟ್ ಸರ್ವಿಸ್ ಅಸೋಸಿಯೇಟ್ ಗಳಾಗಿ ಶ್ರೀರಕ್ಷಾ ಜಿ.ಪಿ, ಸೇಲ್ಸ್ ಅಸೋಸಿಯೇಟ್ ಆಗಿ ಅಕ್ಷಿತಾ ಎಚ್.ವಿ, ವಾಣಿಶ್ರೀ, ಗೀತಾ, ಮೋಹನ್, ಬಿ.ಡಿ ರಕ್ಷಿತ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಸೇಲ್ಸ್ ಆಂಡ್ ಬಿಸಿನೆಸ್ ಅಸೋಸಿಯೇಟ್ ಆಗಿ ಸುಲ್ತಾನ್ ಡಿ, ಮೊಹಮ್ಮದ್ ಫರ್ಹಾತ್, ಹರ್ಷಿತ್, ವಿಶ್ವಾಸ್ ಎನ್, ಶೇಖ್ ಹಂದಾನ್ ರವರು ನೇಮಕಗೊಂಡಿದ್ದಾರೆ ಎಂದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯಿಂದ ಉದ್ಯೋಗಾಧಾರಿತ ಕೌಶಲ್ಯಾಧಾರಿತ ಶಿಕ್ಷಣ…
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣ
ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅಗತ್ಯವಿರುವ ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಭಾಷಾ ಪ್ರಾವೀಣ್ಯ, ಗ್ರಾಹಕ ಸೇವೆ, ಉದ್ಯಮದ ಕಾರ್ಯವೈಖರಿ ಹಾಗೂ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು, ಪ್ರಾಯೋಗಿಕ ಜ್ಞಾನ ಒದಗಿಸುವುದು, ಇಂಟರ್ನ್‌ಶಿಪ್ ಹಾಗೂ ಉದ್ಯೋಗಾವಕಾಶಗಳಿಗೆ ಮಾರ್ಗದರ್ಶನ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸಿದ ನಂತರ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಪಡೆಯಲು ಸಂಸ್ಥೆ ವೇದಿಕೆ ಕಲ್ಪಿಸುತ್ತಿದೆ.
-ಜಯಂತ್ ನಡುಬೈಲು, ಚೇರ್ಮನ್, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು




