March 22, 2026

ಬಜ್ಪೆ: ಮರವೂರು ಸೇತುವೆಯ ರಸ್ತೆ ಬದಿಯಲ್ಲಿ ಬಿರುಕು

0
image_editor_output_image-1344638798-1656568271677.jpg

ಮಂಗಳೂರು: ನಗರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮರವೂರು ಸೇತುವೆಯ ಸನಿಹದ ರಸ್ತೆ ಬದಿಯಲ್ಲಿ ಬಿರುಕು ಕಂಡುಬಂದಿದೆ.

ಇನ್ನು ಸೇತುವೆ ಸನಿಹದ ರಸ್ತೆಯಲ್ಲಿ ಬಿರುಕು ಕಂಡು ಬಂದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ, ಬಿರುಕಿನಿಂದ ಸೇತುವೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ನಗರದಿಂದ ವಿಮಾನ ನಿಲ್ದಾಣದ ಕಡೆ ತೆರಳುವ ರಸ್ತೆಯಲ್ಲಿ ಕೊಂಚ ಕುಸಿತ ಕಂಡುಬಂದಿದ್ದು, ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ೨೦೨೧ ರ ಜೂನ್ 15 ರಂದು ಬೆಳಿಗ್ಗೆ 3ಗಂಟೆ ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಮರವೂರು ಸೇತುವೆಯ ಪಿಲ್ಲರ್ ಸ್ವಲ್ಪ ಕುಸಿದು ಬಿರುಕು ಕಾಣಿಸಿಕೊಂಡಿತ್ತು. ಮುಂಜಾಗೃತ ಕ್ರಮವಾಗಿ ಏರ್ ಪೋರ್ಟ್ಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿತ್ತು.

ಅಲ್ಲದೆ ಸೇತುವೆಯ ಪಿಲ್ಲರ್ನ್ನು ಸರಿಪಡಿಸಲು ಶೀಘ್ರ ಕ್ರಮಕೈಗೊಳ್ಳಲಾಗಿತ್ತು.ತಂತ್ರಜ್ಞಾನದ ಮೂಲಕ ಪಿಲ್ಲರನ್ನು ಮೇಲಕ್ಕೆತ್ತಿ ದುರಸ್ತಿಗೊಳಿಸಲಾದ ಸೇತುವೆಯ ಸಾಮರ್ಥ್ಯ ಪರೀಕ್ಷಿಸಿ ಜುಲೈ 30ರಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!