ಪೊಲೀಸರು ದಾಖಲೆಗೋಸ್ಕರ ವಾಹನ ನಿಲ್ಲಿಸುವಂತಿಲ್ಲ: ಟೋಯಿಂಗ್ ಗೆ ಅವಕಾಶವಿಲ್ಲ: ರವಿಕಾಂತೇಗೌಡ
ದಾಖಲೆಯ ಪರಿಶೀಲನೆಗಾಗಿ ಮಾತ್ರ ವಾಹನ ನಿಲ್ಲಿಸಬಾರದು ಎಂದು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ. ಕಾನೂನು ಪಾಲನೆಗೆ ೩ ವರ್ಷಗಳಿಂದ ಸೂಚನೆ ನೀಡುತ್ತಿದ್ದೇವೆ ಆದರೆ, ಕಾನೂನು ಉಲ್ಲಂಘಿಸುವುದು ಗಮನಕ್ಕೆ ಬಂದಿದೆ ಎಂದರು. ಕೆಲವೊಂದು ಅನುಮಾನಸ್ಪದ ವಾಹನಗಳು ಹಾಗೂ ಕಳ್ಳತನದ ವಾಹನಗಳು, ದಂಡ ಬಾಕಿಯಿರುವ ವಾಹನಗಳನ್ನು ಮಾತ್ರ ಪರಿಶೀಲಿಸಬೇಕು ಎಂದಿದ್ದಾರೆ.
ಕೇವಲ ದಾಖಲೆಗಳನ್ನು ಪರಿಶೀಲನೆಗಳಿಗೋಸ್ಕರ ಮಾತ್ರ ವಾಹನಗಳನ್ನು ನಿಲ್ಲಿಸುವಂತಿಲ್ಲ, ವಾಹನಗಳನ್ನು ನಿಲ್ಲಿಸಿದರೇ ಮಾಹಿತಿ ನೀಡಿ ಎಂದು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ





