ಲಾಸ್ಟರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಯಶಸ್ವಿ ಫುಟ್ಬಾಲ್ ಪಂದ್ಯಾಕೂಟ: ಚಾಂಪಿಯನ್ ಆಗಿ ಹೊರ ಹೊಮ್ಮಿದ ಕಸಬ ಬ್ಲಾಸ್ಟರ್ಸ್ ಬೆಂಗ್ರೆ
ಮಂಗಳೂರು: ಪ್ರತಿಷ್ಠಿತ ಲಾಸ್ಟರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬಂದರ್ ಆಯೋಜಿಸಿದ ತೃತೀಯನೇ ವರ್ಷದ ಒಳಾಂಗಣ ಫುಟ್ಬಾಲ್ ಪಂದ್ಯಾಕೂಟದಲ್ಲಿ ಕಸಬಾ ಬ್ಲಾಸ್ಟರ್ಸ್ ಬೆಂಗ್ರೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ದ್ವಿತೀಯ ಸ್ಥಾನವನ್ನು ಮಂಗಳೂರು ಯುನೈಟೆಡ್ ಎಫ್ ಸಿ ತನ್ನದಾಗಿಸಿತು.
ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿರೋಧ ಪಕ್ಷದ ಉಪನಾಯಕರಾದ ಯು.ಟಿ.ಖಾದರ್ ಅವರು ಮಾತನಾಡಿ ಇಂತಹ ಪಂದ್ಯಾಕೂಟಗಳು ಸೌಹಾರ್ದ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಸರ್ವಧರ್ಮಿಯರನ್ನು ಒಳಗೊಂಡು ಯಶಸ್ವಿ ಪಂದ್ಯಾಕೂಟವನ್ನು ಆಯೋಜಿಸಿದ ಲಾಸ್ಟರ್ಸ್ ಕ್ಲಬ್ ಪದಾಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮೆರಿಲ್ ರೇಗೋ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಝೀನತ್ ಶಂಸುದ್ದೀನ್, ಕೆನರಾ ಆಯುರ್ವೇದಿಕ್ ಮಾಲಕ ಪ್ರತಾಪ್ ಆಳ್ವ, ಯುವ ಉದ್ಯಮಿ ಫೈರೋಝುದ್ದೀನ್ ಬಿ.ಕೆ ಕಲ್ಲಡ್ಕ, ಯುವ ಕಾಂಗ್ರೆಸ್ ಮುಖಂಡರಾದ ಸಿ.ಎಮ್ ರವೂಫ್, ತೌಫೀಖ್ ಎ.ಎಫ್, ಅನಸ್ ವಿಟ್ಲ, ಎನ್ ಎಸ್ ಯು ಐ ದ.ಕ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಉದ್ಯಮಿ ಮೊಹಮ್ಮದ್ ವಿ.ಪಿ, ನಝೀರ್ ಪಿಬಿ ಹಾಗೂ ಲಾಸ್ಟರ್ಸ್ ಕ್ಲಬ್ ಪದಾಧಿಕಾರಿಗಳಾದ ಝಾಕಿರ್, ಶಬೀಬ್, ಮೆಹಫೂಝ್, ನೌರಾನ್, ರಾಹಿಲ್, ಉಸ್ಮಾನ್, ಶಾಝಿಲ್, ಸಲ್ಮಾನ್, ಸಮ್ವಾನ್ ಹಾಗೂ ಹಿಶಾಮ್ ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ರೆಫ್ರಿಯಾಗಿ ಅಝ್ಮಲ್ ಮತ್ತು ಜಾಶಿರ್ ಮುನ್ನಡೆಸಿದರು.
ಕಾರ್ಯಕ್ರಮವನ್ನು ಶಾಹಿಲ್ ಮತ್ತು ಆದಿಲ್ ಎ.ಕೆ ನಿರೂಪಿಸಿದರು.