March 19, 2026

ಕಸ ಎಸೆಯಬಾರದು ಎಂದು ಬ್ಯಾನರ್ ಅಳವಡಿಸಿದ ಸ್ಥಳದಲ್ಲೇ ತ್ಯಾಜ್ಯ ಎಸೆದ ಕಿಡಿಗೇಡಿಗಳು

0
IMG-20220624-WA0005.jpg

ತೆಕ್ಕಾರು: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ತ್ಯಾಜ್ಯ ಎಸೆಯಬಾರದು ಎಂದು ಕಳೆದವಾರ ಎಲ್ಲಾ ಕಡೆಗಳಲ್ಲಿ ಬ್ಯಾನರ್ ಅಳವಡಿಸಲಾಗಿತ್ತು, ಆದರೆ ಸಮರಗಂಡಿ ಬಾಂಬಿಲ ಬಳಿ ಅಳವಡಿಸಲಾಗಿದ್ದ ಮೂರು ಬ್ಯಾನರ್ಗಳನ್ನು ವಿಕೃತ ಮನಸ್ಸಿನ ಕಿಡಿಗೇಡಿಗಳು ಹರಿದು ಹಾಕಿದ್ದು ಮಾತ್ರವಲ್ಲದೇ ತ್ಯಾಜ್ಯ ಎಸೆದಿರುವುದು ಕಂಡುಬಂದಿರುತ್ತದೆ.

ಮುಂದಿನ ದಿನಗಳಲ್ಲಿ ತೆಕ್ಕಾರು ಗ್ರಾಮ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ತ್ಯಾಜ್ಯ ಎಸೆಯುವವರನ್ನು ಕಂಡು ಬಂದಲ್ಲಿ ಗ್ರಾಮ ಪಂಚಾಯತ್ ಗೆ ಅಂತಹ ಕಿಡಿಗೇಡಿಗಳ ಮಾಹಿತಿಯನ್ನು ನೀಡುವುದು ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪಂಚಾಯತ್ ಪ್ರಕಟಣೆ ತಿಳಿಸಿದೆ.

ತ್ಯಾಜ್ಯ ಎಸೆಯುವವರ ಮಾಹಿತಿ ದೊರಕಿದಲ್ಲಿ ಅಂತಹಾ ಕಿಡಿಗೇಡಿಗಳ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತೆಕ್ಕಾರು ಗ್ರಾಮ ಪಂಚಾಯತ್ ಪ್ರಕಟಣೆ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!