ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ, ಪುಸ್ತಕ ಗೂಡು ಲೋಕಾರ್ಪಣೆ
ತೆಕ್ಕಾರು: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮ ಪಂಚಾಯತ್ ಇದರ ವತಿಯಿಂದ ಗೋದಾಮುಗುಡ್ಡೆ ಎಂಬಲ್ಲಿ ಹೊಸದಾಗಿ ಸಮುದಾಯ ಶೌಚಾಲಯ ಹಾಗೂ ಸರಳಿಕಟ್ಟೆ ಬಸ್ ತಂಗುದಾಣದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಾಣ ಮಾಡಿದ ಪುಸ್ತಕ ಗೂಡನ್ನು ಗುರುವಾರದಂದು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಬಿ ಅಬ್ದುಲ್ ರಝಾಕ್ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಮಯ್ಯ ಜಿ ಎಚ್, ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಕೆ ,ಸದಸ್ಯರುಗಳಾದ ಶೇಖರ ಪೂಜಾರಿ, ಕೆ ಎಂ ಹಕೀಂ ತನಲ್, ರಹಿಯಾನತ್, ಯಮುನ, ನೆಬಿಸ, ಆಯಿಸಮ್ಮ ಮತ್ತು ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು




