February 3, 2026

ಮಲ್ಪೆ ಬೀಚ್ ನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರ ರಕ್ಷಣೆ

0
image_editor_output_image415849582-1654509120930.jpg

ಉಡುಪಿ: ಈಜುವ ವೇಳೆ ಮಲ್ಪೆ ಬೀಚ್ನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ನಡೆದಿದೆ.

ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಿಜಾಪುರ ಮೂಲದ ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ರಕ್ಷಿಸಲಾಗಿದೆ.

ಬಿಜಾಪುರ ಮೂಲದವರಾದ ಇವರು ಮಲ್ಪೆ ಬೀಚ್​​ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ ಕಡಲಿಗೆ ಇಳಿಯದಂತೆ ಇಲ್ಲಿನ ಪ್ರವಾಸಿಗರಿಗೆ ಎಚ್ಚರಿಕೆಯನ್ನೂ ನೀಡಿದರೂ ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಈ ವೇಳೆ ನಾಲ್ವರನ್ನು ಜೀವ ರಕ್ಷಕ ದಳದ ಭರತ್​, ಮಧು, ರವಿ ಹಾಗೂ ವಿನೋದ್​​ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!