March 19, 2026

ಮಂಗಳೂರು: ಬಸ್ಸಿನಲ್ಲಿ ಯುವತಿಯರ ವೀಡಿಯೋ ಕ್ಲಿಕ್ಕಿಸಿದ ವಿಕೃತಕಾಮಿ:
ಗೂಸಾ ನೀಡಿದ ಸಾರ್ವಜನಿಕರು

0
rayan_280920_Bus1

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಹೋದರಿ ಯುವತಿಯರ ವೀಡಿಯೋವನ್ನ ತನ್ನ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ವಿಕೃತಕಾಮಿ ವ್ಯಕ್ತಿಗೆ ಪ್ರಯಾಣಿಕರೇ ಸೇರಿ ಬಿಸಿ ಬಿಸಿ ಕಜ್ಜಾಯ ನೀಡಿದ ಘಟನೆ ನಗರದ ಜಪ್ಪಿನಮೊಗರಿನಲ್ಲಿ ನಡೆದಿದೆ.

ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂಬಾತ ಧರ್ಮದೇಟು ತಿಂದ ಕಾಮುಕನೆಂದು ತಿಳಿದುಬಂದಿದೆ.

42 ರೂಟ್ ಸಂಖ್ಯೆಯ ಸಿಟಿ ಬಸ್ ಗಡಿಭಾಗ ತಲಪಾಡಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದು ಬಸ್ಸಿನಲ್ಲಿ ಚಾಲಕನ ಹತ್ತಿರದ ಕ್ಯಾಬಿನ್‌ ಸೀಟಲ್ಲಿ ಕುಳಿತಿದ್ದ ಸಹೋದರಿಯರಿಬ್ಬರ ವೀಡಿಯೋವನ್ನ ತನ್ನ ಮೊಬೈಲ್ ಫೋನಲ್ಲಿ ಚಿತ್ರೀಕರಿಸಿದ್ದಾನೆ. ಇದನ್ನ ಬೇರೊಬ್ಬ ಪ್ರಯಾಣಿಕ ಗಮನಿಸಿದ್ದು ಸಹೋದರಿಯರ ಗಮನಕ್ಕೆ ತಂದಿದ್ದಾನೆ. ಕೂಡಲೇ ಬಸ್ ಪ್ರಯಾಣಿಕರು ಕಾಮುಕನನ್ನ ತರಾಟೆಗೆತ್ತಿಕೊಂಡಿದ್ದು ಜಪ್ಪಿನಮೊಗರು ಎಂಬಲ್ಲಿ ಇಳಿಸಿ ಬಿಸಿ ಬಿಸಿ ಕಜ್ಜಾಯ ನೀಡಿ ಉಪಚರಿಸಿದ್ದಾರೆ.

ಪ್ರಯಾಣಿಕರ ಧರ್ಮದೇಟು ತಿಂದ ವಿಕೃತಕಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

error: Content is protected !!