March 19, 2026

ಕೋಟ: ಮನೆ ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಒಬ್ಬ ಮೃತ್ಯು, ಮತ್ತೊಬ್ಬ ಗಂಭೀರ

0
3d9746ug_dead-body-generic_625x300_03_March_21.webp

ಕೋಟ: ಕೋಟತಟ್ಟು ಪಡುಕರೆ ಶಿರಸಿ ಮಾರಿಕಾಂಬ ದೇವಳದ ಹಿಂಭಾಗ ಮನೆ ಕಟ್ಟಡ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ಓರ್ವ ಸಾವನ್ನಪ್ಪಿ, ಇನ್ನೊರ್ವ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಮಂಜುನಾಥ (36) (ಗಾರೆಮೇಸ್ತ್ರಿ) ತಲೆಗೆ ತೀವ್ರತರಹದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ.
ಮತ್ತೊರ್ವರನ್ನು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿರುವ ಚೇತನ (28) ಎಂದು ಗುರುತಿಸಲಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕೋಟತಟ್ಟು ಪಡುಕರೆ ರಾಜಶೇಖರ ಹಂದೆ ಎಂಬವರ ನೂತನ ಮನೆ ಕಾಮಗಾರಿ ನಡೆಯುವ ವೇಳೆ ಈ ಘಟನೆ ನಡೆದಿದೆ.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!