ಎಸ್ ಡಿ ಪಿ ಐ ವತಿಯಿಂದ ಜನಾಧಿಕಾರ ಸಮಾವೇಶ: ಮುಸ್ಲಿಮರ ಜತೆ ವ್ಯಾಪಾರ ಬಹಿಷ್ಕಾರಿಸುವ ಚಡ್ಡಿಗಳು, ಬೊಮ್ಮಾಯಿ ಯೂಸಫ್ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ಎಲ್ಲಿದ್ದೀರಿ? ಮಜೀದ್ ಪ್ರಶ್ನೆ
ಮಂಗಳೂರು: ಮಂಗಳೂರು: ಎಸ್ ಡಿ ಪಿ ಐ ವತಿಯಿಂದ ಜನಾಧಿಕಾರ ಸಮಾವೇಶ ಶುಕ್ರವಾರ ಮಂಗಳೂರಿನ ಹೊರವಲಯ ಕಣ್ಣೂರಿನ ಮರ್ಹೂಮ್ ಕೆ.ಎಂ.ಶರೀಫ್ ವೇದಿಕೆಯಲ್ಲಿ ನಡೆಯಿತು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಧರ್ಮ ವಿಚಾರದಲ್ಲಿ ಸಮಾಜವನ್ನು ಇಬ್ಬಾಗ ಮಾಡಲು ಹೊರಟಿದೆ. ಮಳಲಿ ಮಸೀದಿ ಬಗ್ಗೆ ಮಾತನಾಡುವ ಭಜರಂಗಿಗಳು ತಮ್ಮದೇ ಪಕ್ಷದ ಜನಾರ್ದನ ರೆಡ್ಡಿ ದೇವಸ್ಥಾನವನ್ನು ಧ್ವಂಸ ಮಾಡಿದಾಗ ಈ ಚಡ್ಡಿಗಳು ಎಲ್ಲಿದ್ದೀರಿ? ಮಳಿಲಿಯಿಂದು ಮರಳು ಕೂಡಾ ನಿಮಗೆ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಸಚಿವರು ಮೊಟ್ಟೆ, ಸಮವಸ್ತ್ರ ಮತ್ತು ಪಿಎಸೈ ಹಗರಣದಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾರೆ. ಸಂಘಪರಿವಾರದ ಕುತಂತ್ರಕ್ಕೆ ಕಾಂಗ್ರೆಸ್ ನವರು ಹೆದರಬಹುದು, ಆದರೆ ಎಸ್ ಡಿ ಪಿ ಐ ಯವರು ಎಂದಿಗೂ ಹೆದರಲ್ಲ ಎಂದು ಆರೋಪಿಸಿದರು.
ಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ. ಇಲ್ಲಿ ವ್ಯಾಪಾರ ಬಹಿಷ್ಕಾರ ಮಾಡಿ, ನಿಮ್ಮ ಗುರು ಬೊಮ್ಮಾಯಿ ಯೂಸಫ್ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಾಚಿಕೆಯಾಗಲ್ವಾ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪ್ರಶ್ನಿಸಿದ್ದಾರೆ. 2006ರ ಸೆ.3.ರಂದು ಬಳ್ಳಾರಿಯ ಸಂಡೂರಿನಲ್ಲಿ 200 ವರ್ಷದ ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್ ಇಟ್ಟು ಒಡೆದು ಹಾಕಿ,
ದೇವಿಯ ವಿಗ್ರಹ ನಾಶ ಮಾಡಿದ್ದು ನಿಮ್ಮದೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ. ಈಗ ನಿಮಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ, ರೆಡ್ಡಿ ಮನೆಗೆ ಪಾದಾಯಾತ್ರೆ ಮಾಡಿ. ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಬೆತ್ತಲೆ ಪ್ರಪಂಚ ಪುಸ್ತಕದಲ್ಲಿ ಬರೆದಿದ್ದಾರೆ.
ಒಂದು ನೆನಪಿಡಿ ಮಳಲಿ ಮಸೀದಿಯ ಜಾಗದ ಒಂದು ಹಿಡಿ ಮರಳು ನಿಮಗೆ ಸಿಗಲಿಕ್ಕಿಲ್ಲ. ಆರ್‍ಎಸ್‍ಎಸ್ ಆಟಾಟೋಪಕ್ಕೆ ಕಾಂಗ್ರೆಸ್-ಜೆಡಿಎಸ್ ಬೆದರಬಹುದು ನಿಮ್ಮ ಆಟಕ್ಕೆ ಬೆದರುವ ಮಕ್ಕಳು ನಾವಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ನಾಗ್ಪುರದ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ.
ಇಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುವ ನಿಮ್ಮ ಗುರು ಇದೇ ಬೊಮ್ಮಾಯಿ ಯೂಸಫ್ ಅಲಿ ಎಂಬ ಬ್ಯಾರಿಯೊಂದಿಗೆ 2 ಸಾವಿರ ಕೋಟಿಯ ವ್ಯವಹಾರಕ್ಕೆ ಸಹಿ ಹಾಕುತ್ತಾರೆ.
ನಾಚಿಕೆಯಾಗುದಿಲ್ವಾ, ನಿಮ್ಮ ಬಹಿಷ್ಕಾರ ಬಡ ಮುಸ್ಲಿಂಮನ ಮೇಲಾ, ನಿಮಗೆ ಯೂಸಫ್ ಅಲಿ ಪರ್ಸೆಂಟ್ ಕೊಡ್ತಾರೆ. ಮಂಗಳೂರು ಎನ್‍ಆರ್‍ಸಿ ಪ್ರತಿಭಟನೆ ವೇಳೆ ಗುಂಡು ಹಾರಿಸಲು ಸಾಧ್ಯವಾಗುವುದಾದರೆ. ಶಿವಮೊಗ್ಗದಲ್ಲಿ 144 ಸೆಕ್ಷನ್ ವೇಳೆ ಮುಸ್ಲಿಂ ಅಂಗಡಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ದಾಳಿ ನಡೆಸುವಾಗ ಪೆÇಲೀಸರೇ ನಿಮ್ಮ ಬಂದೂಕಿನಲ್ಲಿ ಗುಂಡುಗಳು ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಈ ಜನಾಧಿಕಾರ ಸಮಾವೇಶ ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.
ಇಲ್ಯಾಸ್ ತುಂಬೆ ಮಾತನಾಡಿ ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಅಶಾಂತಿಯ ನಾಡಾಗಿ ಮಾರ್ಪಟ್ಟಿದೆ. ಮಸೀದಿ- ಚರ್ಚ್ಗಳ ಮೇಲೆ ದಾಳಿ, ದಲಿತರು, ಅಲ್ಪಸಂಖ್ಯಾತರ ಮೇಲಿನ ದಾಳಿ ಇಲ್ಲಿ ಸಾಮಾನ್ಯವೆಂಬಂತಾಗಿದೆ. ಮುತಾಲಿಕ್, ಈಶ್ವರಪ್ಪರಂತಹ ಸಂಘಪರಿವಾರದ ನಾಯಕರು ಎಗ್ಗಿಲ್ಲದೆ ನಾಲಗೆ ಹರಿಯಬಿಡುತ್ತಿದ್ದಾರೆ. ಸಂಘಪರಿವಾರದ ನಾಯಕರ ಈ ಕೃತ್ಯಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಅಭಯ ನೀಡುತ್ತಿದ್ದಾರೆ. ಇದರಿಂದ ಪ್ರೇರಣೆಗೊಂಡ ಸಂಘಪರಿವಾರದ ಕಾರ್ಯಕರ್ತರು ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ಸಚಿವ ಸಂಪುಟದ ಸದಸ್ಯರು ಕೂಡ ನರಮೇಧ, ಹತ್ಯಾಕಾಂಡದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿ ವಿಷಯವನ್ನು ಮುಂದಿಟ್ಟು ಮತ ಕೇಳಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ ಎಂಬ ವಾಸ್ತವದ ಅರಿವು ಬಿಜೆಪಿಗೆ ಇದೆ. ಈ ಹಿನ್ನೆಲೆಯಲ್ಲಿ ಹಿಂದೂ ? ಮುಸ್ಲಿಮ್ ಎಂಬ ಕೋಮು ವಿಷಯವನ್ನು ಮುಂದಿಟ್ಟು ಸಮಾಜ ವಿಭಜನೆಯಲ್ಲಿ ತೊಡಗಿದೆ ಎಂದು ಟೀಕಿಸಿದ ಅವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಉತ್ತರ ಭಾರತದಲ್ಲಿ ಹಿಜಾಬ್ ವಿಷಯ ಬೇಯುವುದಿಲ್ಲ ಎಂದು ಮನಗಂಡ ಸಂಘಪರಿವಾರ, ದಕ್ಷಿಣ ರಾಜ್ಯಗಳಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ಮುಸ್ಲಿಮ್ ಮಹಿಳೆಯರಿಗೆ ಕಿರುಕುಳ ನೀಡುತ್ತಿದೆ. ಹಿಜಾಬ್ ಬಳಿಕ ಹಲಾಲ್ ವಿವಾದ ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯಿತು. ಇದೀಗ ಎಲ್ಲೆಂದರಲ್ಲಿ ಲಿಂಗ ಉದ್ಭವವಾಗುವ ಸುದ್ದಿ ಕೇಳಿಬರುತ್ತಿದೆ. ಮಳಲಿ ಮಸೀದಿಯನ್ನು ಗುರಿಯಾಗಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.
ಅಲ್ಫಾನ್ಸ್ ಫ್ರಾಂಕೋ ಮಾತನಾಡಿ ತಾಂಬೂಲದಲ್ಲಿ ಬಿಜೆಪಿ ದೇಶವನ್ನು ಕಟ್ಟಲು ಹೊರಟಿದೆ. ಇಂತಹ ಪಕ್ಷವನ್ನು ಇಡೀ ದೇಶದಿಂದ ನಿರ್ಮೂಲನೆ ಮಾಡಬೇಕು. ಎಸ್ ಡಿ ಪಿ ಐ ಸಮಾಧಾನದ ಪಕ್ಷದವಾಗಿದೆ. ಭವ್ಯವಾದ ದೇಶವನ್ನು ಕಟ್ಟುತ್ತದೆ. ಅಂದು ದ.ಕ ಜಿಲ್ಲೆಯಲ್ಲಿ ಚೆರ್ಚ್ ದಾಳಿ ನಡೆದಾಗ ಯಾವುದೇ ಬಿಜೆಪಿ ಪಕ್ಷ ಕ್ರೈಸ್ತ ಪರವಾಗಿ ನಿಲ್ಲಲಿಲ್ಲ. ಅಂದು ನಿಂತದ್ದು, ಎಸ್ ಡಿ ಪಿ ಐ ಪಕ್ಷ. ಒಬ್ಬ ಕೋಮುವಾದಿ ಮುತಾಲಿಕ್ ಗೆ ರಾಜಮರ್ಯಾದೆ ನೀಡಿದ ಜಿಲ್ಲೆ ದ.ಕ ವಾಗಿದ್ದು, ಇದೊಂದು ದುರಂತವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಎಸ್ ಡಿಪಿಐ ಇಂದು ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಬೆಳೆಯುತ್ತಿದೆ. ಜನಪರ ಹೋರಾಟ, ಪಾರದರ್ಶಕ ನಾಯಕತ್ವದಿಂದ ಪಕ್ಷ ಇಂದು ಜನಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಮುಖಂಡ ರಿಯಾಝ್ ಫರಂಗಿಪೇಟೆ ಮಾತನಾಡಿ, ದೇಶದಲ್ಲಿ ನಡೆಯುವ ಕೋಮುವಾದ ಆಟಾಟೋಪಗಳನ್ನು ನೋಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಟ್ಟೆ ಕಟ್ಟಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮ ಕಣ್ಣಿನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯುವ ದಿನಗಳು ದೂರವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಮುವಾಟ್ಟುಪುಝ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, SಆPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್ ನೆಲಮಂಗಲ. ಮುಖ್ಯ ಅತಿಥಿಗಳಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು, ಅಫ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ವುಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಆಯಿಶಾ ಬಜ್ಪೆ, ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮಹಮ್ಮದ್ , ಮತ್ತಿತರ ಗಣ್ಯರು ಪಾಲ್ಗೊಂಡಿದ್ದಾರೆ.
ಅಬ್ದುಲ್ ಮಜೀದ್ ಖಾನ್, ಅಕ್ಬರಲಿ, ರಿಯಾಝ್ ಕಡಂಬು, ಅಬೂಬಕ್ಕರ್ ಕುಳಾಯಿ, ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಉತ್ತರ ಕನ್ನಡ ತೌಫೀಕ್ ಬ್ಯಾರಿ, ಚಿಕ್ಕಮಗಳರು ಗೌಸ್, ಸಕಲೇಶಪುರ ಸಲೀಂ, ಕಸಾರಗೋಡು ಮುಹಮ್ಮದ್, ನಸ್ರೀಯಾ ಬೆಳ್ಳಾರೆ, ಮಿಸ್ರಿಯಾ ಕಣ್ಣೂರು, ವಿಕ್ಟರ್ ಮಾರ್ಟೀಸ್, ಮುನೀಬ್ ಬೆಂಗರೆ, ಸಂಶಾದ್ ಅಬೂಬಕರ್, ಅಬ್ದುಲ್ ಹಮೀದ್ , ಪಕ್ಷದ ಜನಪ್ರತಿನಿಧಿಗಳು ಮತ್ತಿತರರು ಪಾಲ್ಗೊಂಡಿದ್ದಾರೆ.
ಇದಕ್ಕೂ ಮೊದಲು ಬಿಜೆಪಿ ಸರ್ಕಾರದ ದುರಾಡಳಿತವನ್ನು ಬಿಂಬಿಸುವ ನಾಟಕ ಪ್ರದರ್ಶನ ನಡೆಯಿತು. ಎಸ್ ಡಿಪಿಐ `ಜನಾಧಿಕಾರ ಸಮಾವೇಶ’ಕ್ಕೆ ಕರಾವಳಿ ಜಿಲ್ಲೆಗಳ ಮೂಲೆ ಮೂಲೆಗಳಿಂದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದಾರೆ.