ಪತ್ರಕರ್ತ ಹಸೈನಾರ್ ಜಯನಗರ ರವರಿಗೆ ಕನ್ನಡ ಕಲಾಪ್ರತಿಭೋತ್ಸವ 2022 ಮಾಧ್ಯಮ ವಿಭಾಗದಿಂದ ಸಮಾಜ ರತ್ನರಾಜ್ಯ ಪ್ರಶಸ್ತಿ
ಸುಳ್ಯ: ಶ್ರೀ ಜ್ಞಾನ ಮಂದಾರ ಟ್ರಸ್ಟ್ ರಿ.ಬೆಂಗಳೂರು ಇದರ ಆಶ್ರಯದಲ್ಲಿ ಮಿತ್ರ ಯುವಕ ಮಂಡಲ ರಿ ಕೊಯಿಕುಳಿ ಕುರಲ್ ತುಳು ಕೋಟ ದುಗಲಡ್ಕ ಇದರ ಸಹಯೋಗದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ 2022 ಸಮಾಜ ರತ್ನ ರಾಜ್ಯಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 12 ರಂದು ಸುಳ್ಯ ಕನ್ನಡಭವನ ಸಭಾಭವನದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಮಾಜ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿ ದ್ದು ಸುಳ್ಯ ಮಾಧ್ಯಮ ವಿಭಾಗದಿಂದ ಪತ್ರಕರ್ತ ಹಸೈನಾರ್ ಜಯನಗರ ಪ್ರಶಸ್ತಿಗೆ ಭಾಜನರಾಗಿದ್ದಾರೆ.





