NISSAN ಕಂಪೆನಿಯ ಡಾಟ್ಸನ್ ಮಾದರಿಯ ಕಾರುಗಳ ಉತ್ಪಾದನೆ ಸ್ಥಗಿತ
ನವದೆಹಲಿ: ಜಪಾನ್ ಮೂಲದ ನಿಸ್ಸಾನ್ ಕಂಪನಿಯ ಜನಪ್ರಿಯ ಬ್ರಾಂಡ್ ಆದ ಡಾಟ್ಸನ್ ಮಾದರಿಯ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳಿಸುವುದಾಗಿ ಕಂಪನಿ ಪ್ರಕಟಿಸಿದೆ
ಭಾರತದಲ್ಲಿ ಈ ಕಾರುಗಳ ಮಾರಾಟ ಇತ್ತೀಚಿನ ವರ್ಷಗಳಲ್ಲಿ ಹಂತಹಂತವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.
2016ರಲ್ಲಿ ಡಾಟ್ಸನ್‌ನ 87,300 ಕಾರುಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ 2021ರಲ್ಲಿ ಈ ಕಾರುಗಳ ಮಾರಾಟ ಶೇ. 90ರಷ್ಟು ಇಳಿಕೆಯಾಗಿದ್ದು ಕೇವಲ 6,400 ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.




