February 2, 2026

ವಿಟ್ಲ: ತೆಂಗಿನ ಕಾಯಿ ತೆಗೆಯುತ್ತಿದ್ದ ವೇಳೆ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು: ಅಳಿಕೆ ನಿವಾಸಿ ಹಮೀದ್ ಮೃತ್ಯು

0
image_editor_output_image-1583076388-1649489438099

ವಿಟ್ಲ; ತೋಟದ ಕೆರೆಯ ಬದಿಯಲ್ಲಿ ತೆಂಗಿನ ಕಾಯಿ ಹೆಕ್ಕುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಅಳಿಕೆ ಗ್ರಾಮದ ಪಡೀಲ್ ಎಂಬಲ್ಲಿ ನಡೆದಿದೆ. ಮೃತರನ್ನು ಅಳಿಕೆ ಗ್ರಾಮದ ಪಡೀಲ್ ನಿವಾಸಿ ಹಮೀದ್ (54) ಎಂದು ಗುರುತಿಸಲಾಗಿದೆ.

ತಮ್ಮ ಮನೆಯ ತೋಟದ ಕೆರೆಯ ಬದಿಯಲ್ಲಿದ್ದ ತೆಂಗಿನಕಾಯಿಯನ್ನು ಹೆಕ್ಕುತ್ತಿದ್ದ ಸಂದರ್ಭದಲ್ಲಿ ಎರಡು ತೆಂಗಿನಕಾಯಿ ಹೆಕ್ಕಿ ಮೇಲೆತ್ತಿದ್ದರು. ಈ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಮನೆಯಿಂದ ತೋಟದ ಕಡೆಗೆ ಹೊರಟ ಹಮೀದ್ ಅವರು ಹೊತ್ತಾದರೂ ಮನೆಗೆ ಬಾರದ ಹಿನ್ನಲೆ ಮನೆಯವರು ತೋಟಕ್ಕೆ ಹುಡುಕಿಕೊಂಡು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ ಮತ್ತು 4 ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!