ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ: ವಿಟ್ಲದ ಬ್ಲೇಡ್ ಸಾಧಿಕ್ ಸಹಿತ ಇಬ್ಬರ ಬಂಧನ
ಬೆಂಗಳೂರು: ಬೆಂಗಳೂರಿನ ನಾಗೇನಹಳ್ಳಿ ಮುಖ್ಯರಸ್ತೆಯಲ್ಲಿ ರೈಲ್ವೇ ಟ್ರಾಕ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಟ್ಲ ನಿವಾಸಿ ರೌಡಿಶೀಟರ್ ಸಾಧಿಕ್ ಯಾನೆ ಬ್ಲೇಡ್ ಸಾಧಿಕ್ ಮತ್ತು ಬೆಂಗಳೂರು ನಿವಾಸಿ ಅಶ್ಪಾಕ್ ಬಂಧಿತ ಆರೋಪಿ.
ಇವರಿಂದ 23 ಗ್ರಾ.ತೂಕದ ಅಮಲು ಪದಾರ್ಥ ಮತ್ತು ಒಂದು ಕಪ್ಪು ಬಣ್ಣ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.





