ವಿಟ್ಲ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಪತ್ತೆ: ದನಗಳನ್ನು ಬಿಟ್ಟು ಪರಾರಿಯಾದ ಪಿಕಪ್ ಚಾಲಕ
ವಿಟ್ಲ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪತ್ತೆ ಹಚ್ಚಿ ವಿಟ್ಲ ಪೊಲೀಸರಿಗೆ ಒಪ್ಪಿಸಿದ ಘಟನೆ ಪೆರುವಾಯಿ ಗ್ರಾಮದ ಕಡೆಂಗೋಡ್ಲು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಪೆರುವಾಯಿ ಗ್ರಾಮದ ಕಿನಿಯರಪಾಲು ನಿವಾಸಿ ಸತೀಶ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪೆರುವಾಯಿ ಗ್ರಾಮದ ಕಡೆಂಗೋಡ್ಲು ಎಂಬಲ್ಲಿರುವ ಇರುವ ಸಮಯ ಕುದ್ದುಪದವು ಕಡೆಯಿಂದ ಮುರುವ ಕಡೆಗೆ ಫಿಕ್ ಅಪ್ ವಾಹನ ಚಾಲಕನು ಕಪ್ಪು ಬಣ್ಣದ ದನ-01 ಹಾಗೂ ನಸು ಕಂದು ಬಿಳಿ ಬಣ್ಣದ ಕರು-01ನ್ನು ಹತ್ಯೆಗಾಗಿ ಎಲ್ಲಿಂದಲೋ ಹೈನುಗಾರನಿಂದ ಖರೀದಿಸಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಸತೀಶಗ ಅವರು ನಿಲ್ಲಿಸಲು ಮುಂದದಾಗ ಚಾಲಕ ವಾಹನ ನಿಲ್ಲಿಸಿ ವಾಹನದಿಂದ ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಇಳಿಸಿ ಆರೋಪಿ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಜಾನುವಾರನ್ನು ಸಾಗಾಟ ಮಾಡಿದ ಆರೋಪಿಗೆ ಮಾರಾಟ ಮಾಡಿದ ಹಾಗೂ ಖರೀದಿಸಿ ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.






