ವಿಟ್ಲ: ಗುಡ್ಡೆಯಲ್ಲಿ ಒಂದೇ ಕೋಮಿಗೆ ಸೇರಿದ ಜೋಡಿ ಪತ್ತೆ: ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ವಿಟ್ಲ: ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡೆಯಲ್ಲಿ ಮುಸ್ಲಿಂ ಜೋಡಿಯು ಸರಸ ಸಲ್ಲಾಪ ನಡೆಸುತ್ತಿದ್ದ ಘಟನೆ ವರದಿಯಾಗಿದ್ದು, ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡೆಯಲ್ಲಿ ಹಾಡಹಗಲೇ ಸರಸ ನಡೆಸುತ್ತಿದ್ದ ಬಗ್ಗೆ ಕಂಡ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜೋಡಿಯನ್ನು ಮತ್ತು ದ್ವಿಚಕ್ರ ವಾಹನ ವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕೋಡಪದವು ಮೂಲದ ಯುವತಿ ಮತ್ತು ಬರಿಮಾರು ಮೂಲದ ಯುವಕ ಎಂದು ತಿಳಿದು ಬಂದಿದೆ. ಇಬ್ಬರನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






