February 3, 2026

ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ವೃದ್ಧ: ಮಗ- ಸೊಸೆ ಸೇರಿ ನಾಲ್ವರು ಸಜೀವ ದಹನ

0
image_editor_output_image-981105961-1647668927702.jpg

ತಿರುವನಂತಪುರಂ: ವೃದ್ಧನೊಬ್ಬ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಗ- ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳ ಸಾವಿಗೆ ಕಾರಣವಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳಾದ ಮೆಹ್ರಾ (16) ಹಾಗೂ ಅಸ್ನಾ (13) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹಮೀದ್ (79) ಎಂದು ಗುರುತಿಸಲಾಗಿದ್ದು, ಈತ ಫೈಸಲ್ ತಂದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜಮೀನು ನೀಡದ ಕಾರಣ ಹಮೀದ್ ತನ್ನ ಮಗನ ಹತ್ಯೆಗೆ ಯೋಜಿಸಿದ್ದು, ಅದಕ್ಕಾಗಿ ಮನೆಯಲ್ಲಿ ಪೆಟ್ರೋಲ್ ಶೇಖರಿಸಿ ಇಟ್ಟುಕೊಂಡಿದ್ದ. ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮುನ್ನ ಬೆಂಕಿ ನಂದಿಸಲು ನೀರು ಸಿಗದಂತೆ ಮಾಡಲು ಮನೆಯ ಟ್ಯಾಂಕ್ ನಲ್ಲಿದ್ದ ನೀರನ್ನು ಪೂರ್ತಿಯಾಗಿ ಖಾಲಿ ಮಾಡಿದ್ದ. ಫೈಸಲ್ ಮತ್ತು ಕುಟುಂಬ ಮಲಗಿದ್ದ ವೇಳೆ ಹಮೀದ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಅಲ್ಲಿಂದ ಪರಾರಿಯಾಗಿ ಸಂಬಂಧಿಕರ ಮನೆಗೆ ತೆರಳಿದ್ದ.

ಮನೆ ಪೂರ್ತಿ ಸುಟ್ಟು ಭಸ್ಮವಾಗಿದ್ದು, ಫೈಸಲ್, ಪತ್ನಿ, ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ. ಇದೀಗ ಸಂಬಂಧಿಕರ ಮನೆಯಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ.

ಮೃತ ಫೈಸಲ್ ಜೀವನ ನಿರ್ವಹಣೆಗಾಗಿ ದಿನಸಿ ಅಂಗಡಿ ಇಟ್ಟುಕೊಂಡಿದ್ದನು. ಫೈಸಲ್ ಮತ್ತು ಆತನ ತಂದೆ ಹಮೀದ್ ಹಲವು ವರ್ಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದರು.

Leave a Reply

Your email address will not be published. Required fields are marked *

error: Content is protected !!