September 20, 2024

ಬೆಳ್ತಂಗಡಿ: ರಸ್ತೆಯಲ್ಲಿ ಚಿರತೆ ಓಡಾಟ: ಸಿಸಿ ಕ್ಯಾಮಾರದಲ್ಲಿ ಸೆರೆ

0

ಬೆಳ್ತಂಗಡಿ: ಹುಲಿ ಗಣತಿ ಯೋಜನೆಯ ಉದ್ದೇಶವನ್ನಿಟ್ಟುಕೊಂಡು ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್ನಲ್ಲಿ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆಯ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆಯು ಓಡಾಡಿರುವ ಚಿತ್ರ ಸೆರೆಯಾಗಿದೆ.

ಹುಲಿ ಸಂಕುಲವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಏನಾದರೊಂದು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುತ್ತದೆ. ಅದೇ ರೀತಿ 5 ದಿನಗಳಿಗೊಮ್ಮೆ ಈ ಯೋಜನೆಯ ಚಿತ್ರಗಳನ್ನು ಸಂಗ್ರಹಿಸಲಾಗುತ್ತಿದ್ದು, ಚಿರತೆ ಓಡಾಟದ ಚಿತ್ರ ಕಂಡು ಬಂದಿದೆ.

ಮಾ.7ರ ಮುಂಜಾನೆ 4ರ ಸುಮಾರಿಗೆ ಇಲ್ಲಿ ಚಿರತೆ ಓಡಾಟ ನಡೆಸಿದೆ. ಈ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದು, ಹೆದ್ದಾರಿಯಲ್ಲಿ ಆಗಾಗ ಚಿರತೆ ಓಡಾಡುವ ಕುರಿತು ವಾಹನ ಸವಾರರು ತಿಳಿಸಿದ್ದರು.

ಸದ್ಯ ಕ್ಯಾಮೆರಾ ಟ್ರ್ಯಾಪಿಂಗ್​ನಲ್ಲಿ ಚಿರತೆ ಚಿತ್ರ ಸೆರೆಯಾಗಿದೆ.
ಹುಲಿ ಗಣತಿ ಯೋಜನೆ ನಿಮಿತ್ತ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್​ನಲ್ಲಿ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆಯಾಗಿದೆ.

ಇದು ಇಲ್ಲಿನ ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!