August 21, 2026

ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತ ಬ್ರೆಂಟ್‌ ರೆನಾಡ್‌ ಮೃತ್ಯು

0
image_editor_output_image-787542379-1647242256664.jpg

ಇರ್ಪಿನ್: ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯದ ಇರ್ಪಿನ್ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತ ಬ್ರೆಂಟ್‌ ರೆನಾಡ್‌ ಅವರು ಭಾನುವಾರ ಬಲಿಯಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಕೀವ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಆ್ಯಂಡ್ರಿಯ್ ನ್ಯೆಬಿತೋವ್ ತಿಳಿಸಿದ್ದಾರೆ.

ಗಾಯಗೊಂಡಿರುವ ಪತ್ರಕರ್ತನ ಗುರುತು ಗೊತ್ತಾಗಿಲ್ಲ. ಸಂಘರ್ಷಪೀಡಿತ ಸ್ಥಳದಿಂದ ಅವರು ಪಾರು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ವಿಡಿಯೊ ಜರ್ನಲಿಸ್ಟ್‌ ಆಗಿದ್ದ ಬ್ರೆಂಟ್‌ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಿತ್ರ ನಿರ್ಮಾಪಕ ಆಗಿದ್ದರು. ಅವರು ಪತ್ರಿಕೆಗೆ ಉತ್ತಮ ಕೊಡುಗೆ ನೀಡಿದ್ದರು. ಅವರ ಅಗಲಿಕೆ ಆಘಾತವಾಗಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

‘ಬ್ರೆಂಟ್‌ ಅವರು 2015ರ ವೇಳೆಯಲ್ಲಿ ಅವರು ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ಪತ್ರಿಕೆಯ ಭಾಗವಾಗಿರಲಿಲ್ಲ. ಜತೆಗೆ ಅವರು ಉಕ್ರೇನ್‌ಗೆ ಹೋಗಿದ್ದು ಪತ್ರಿಕೆಯ ಕೆಲಸಕ್ಕಾಗಿ ಅಲ್ಲ’ ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!