March 22, 2026

ಆಸ್ಟ್ರೇಲಿಯನ್ ರಾಪರ್, ಯೂಟ್ಯೂಬ್ ಸ್ಟಾರ್ 22ನೇ ವಯಸ್ಸಿನಲ್ಲೇ ನಿಧನ

0
image_editor_output_image-544778888-1646803222643.jpg

ವಾಷಿಂಗ್ಟನ್: ಆಸ್ಟ್ರೇಲಿಯನ್ ರಾಪರ್- ಯೂಟ್ಯೂಬ್ ಸ್ಟಾರ್ ಲಿಲ್ ಬೋ ವೀಪ್ ಅವರು ತನ್ನ 22ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮಾರ್ಚ್ 3ರಂದು ಲಿಲ್ ಬೋ ವೀಪ್ ನಿಧನರಾಗಿದ್ದಾರೆ ಎಂದು ಆಕೆಯ ತಂದೆ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

“ಈ ವಾರಾಂತ್ಯದಲ್ಲಿ ಖಿನ್ನತೆ, ಆಘಾತ ಮತ್ತು ಮಾದಕ ವ್ಯಸನದ ವಿರುದ್ಧ ನನ್ನ ಮಗಳ ಜೀವನದ ಹೋರಾಟವನ್ನು ನಾವು ಕಳೆದುಕೊಂಡಿದ್ದೇವೆ. ನಾವು ಅವಳನ್ನು ಅಮೆರಿಕದಿಂದ ತುರ್ತು ವಾಪಸಾತಿ ಮೂಲಕ ಕರೆದುಕೊಂಡು ಬಂದಾಗಿನಿಂದ ನಾವು ಹೋರಾಡುತ್ತಿದ್ದೇವೆ.

ಆದರೆ ಅದರಲ್ಲಿ ಸೋಲನುಭವಿಸಿದ್ದೇವೆ” ಎಂದು ಆಕೆಯ ತಂದೆ ಮ್ಯಾಥ್ಯೂ ಸ್ಕೋಫೀಲ್ಡ್ ಹೇಳಿದ್ದಾರೆ. ಯೂಟ್ಯೂಬರ್ ಲಿಲ್ ಬೋ ವೀಪ್ ಸಾವಿಗೆ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

Leave a Reply

Your email address will not be published. Required fields are marked *

error: Content is protected !!