ಮುಸ್ಲಿಮರ ಮತದಾನದ ಹಕ್ಕನ್ನು ಹಿಂಪಡೆಯಬೇಕು: ಬಿಜೆಪಿ ಶಾಸಕ
ಬಿಹಾರ: ಮುಸ್ಲಿಮರ ಮತದಾನದ ಹಕ್ಕನ್ನು ಹಿಂಪಡೆಯುವಂತೆ ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಅವರು ಗುರುವಾರ ಒತ್ತಾಯಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಹಕ್ಕುಗಳನ್ನು ನೀಡಬೇಕು ಎಂದು ಎಐಎಂಐಎಂ ನಾಯಕ ಅಖ್ತರುಲ್ ಇಮಾಮ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಮಾತನ್ನು ಹೇಳಿದ್ದಾರೆ. 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮುಸ್ಲಿಂ ಸಮುದಾಯಕ್ಕೆ ಪಾಕಿಸ್ತಾನದ ರೂಪದಲ್ಲಿ ತುಂಡು ಭೂಮಿ ನೀಡಲಾಗಿತ್ತು. ಅವರು ಅಲ್ಲಿಗೆ ಹೋಗಬೇಕಿತ್ತು. ಅವರು ಈ ದೇಶದಲ್ಲಿ ನಮಗೆ ಬೇಡ ಎಂದು ಠಾಕೂರ್ ಹೇಳಿದ್ದಾರೆ.