July 6, 2026

ಬಿಸ್ಕೆಟ್, ನೂಡಲ್ಸ್ ಬಾಕ್ಸ್ ಗಳಲ್ಲಿ ಗಾಂಜಾ ಸಾಗಾಟ: 80 ಕೆ.ಜಿ. ಗಾಂಜಾ ಸಹಿತ ಮೂವರ ಬಂಧನ

0
image_editor_output_image1594299524-1645852150923.jpg

ಬೆಂಗಳೂರು: ಮತ್ತೊಂದು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ. 

ಬಂಧಿತರಿಂದ 80 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬಿಸ್ಕೆಟ್ ಹಾಗೂ ನೂಡಲ್ಸ್ ಬಾಕ್ಸ್ ಗಳಲ್ಲಿ ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಬಂಧಿತರನ್ನು ಶ್ರೀರಾಮಪುರದ ಮುತ್ತುರಾಜ್, ಮುಂಬೈನ ಗೌತಮ್ ಮತ್ತು ತಿರುಪತಿಯ ರಫಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲಿಗೆ ಮುತ್ತುರಾಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ಗಾಂಜಾವನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಈ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದು ಅವರನ್ನು 80 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

Leave a Reply

Your email address will not be published. Required fields are marked *

You may have missed

error: Content is protected !!