ಧರ್ಮಸ್ಥಳ ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ: SDPI ಖಂಡನೆ

ಬೆಳ್ತಂಗಡಿ: ಧರ್ಮಸ್ಥಳದ ಕನ್ಯಾಡಿ ಎಂಬಲ್ಲಿ ಕ್ಷುಲ್ಲಕ ವಿಷಯಕ್ಕೆ ಹಿಂದೂ ಸಂಘಟನೆಯ ನೇತಾರ ಕೃಷ್ಣ ಡಿ ಎಂಬಾತ ದಲಿತ ಯುವಕನನ್ನು ಅಮಾನುಷವಾಗಿ ಹತ್ಯೆ ನಡೆಸಿರುವ ಘಟನೆಯನ್ನು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ ತೀವ್ರವಾಗಿ ಖಂಡಿಸಿದ್ದಾರೆ.ರಾಜ್ಯದಲ್ಲಿ ಹಿಂದುತ್ವ ಶಕ್ತಿಗಳಿಂದ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ದೌರ್ಜನ್ಯ ದಿನ ನಿತ್ಯ ಹೆಚ್ಚುತ್ತಲೆ ಇದೆ.
ರಾಜ್ಯ ಬಿಜೆಪಿ ಸರಕಾರ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುದೆ ಇದಕೆಲ್ಲಾ ಕಾರಣ. ಆದ್ದರಿಂದ ಕನ್ಯಾಡಿಯಲ್ಲಿ ದಲಿತ ಯುವಕನನ್ನು ಹತ್ಯೆ ನಡೆಸಿದ ಆರೋಪಿಯನ್ನು ಮತ್ತು ಆತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪಿಯ ಸಹೋದರ ಭಜರಂಗದಳದ ಮುಖಂಡ ಭಾಸ್ಕರ್ ಧರ್ಮಸ್ಥಳ ಎಂಬುವವನನ್ನೂ ತಕ್ಷಣ ಬಂಧಿಸಬೇಕು ಇಲ್ಲವಾದಲ್ಲಿ SDPI ಪಕ್ಷದ ವತಿಯಿಂದ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ತಾಲೂಕಿನಾದ್ಯಂತ ಉಘ್ರ ಹೋರಾಟ ನಡೆಸಲಾಗುದು ಎಂಬ ಎಚ್ಚರಿಕೆ ನೀಡಿದ್ದಾರೆ.
ನಿಸಾರ್ ಕುದ್ರಡ್ಕ
(ಅಧ್ಯಕ್ಷರು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ)