March 21, 2026

ಕಡಬ: ಮಧ್ಯರಾತ್ರಿ ಅನುಮಾನಾಸ್ಪದ ವ್ಯಕ್ತಿ ತಿರುಗಾಟ- ಟಾರ್ಚ್ ಬೆಳಕಿನೊಂದಿಗೆ ಬೆನ್ನತ್ತಿದ ಎಸ್.ಐ. ರುಕ್ಮ ನಾಯ್ಕ್

0
IMG-20220220-WA0039.jpg

ಕಡಬ: ಮಧ್ಯರಾತ್ರಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಗಸ್ತಿನಲ್ಲಿದ್ದ ಕಡಬ ಠಾಣಾಧಿಕಾರಿ ರುಕ್ಮನಾಯ್ಕ್ ಹಾಗೂ ಪೊಲೀಸರು ಓಡಿಸಿದ್ದು, ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

ರಸ್ತೆ ಬದಿಯಲ್ಲಿ ಮಧ್ಯರಾತ್ರಿ ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬ ತಿರುಗಾಡುವುದನ್ನು ಗಮನಿಸಿದ ಗಸ್ತಿನಲ್ಲಿದ್ದ ಕಡಬ ಪೊಲೀಸರು ಆತನನ್ನು ಮಧ್ಯರಾತ್ರಿ ಅಟ್ಟಡಿಸಿದ ಘಟನೆ ಪೆರಾಬೆ ಗ್ರಾಮದ ಕುಂತೂರಿನಲ್ಲಿ ನಡೆದಿದೆ. ಕಡಬ ಎಸ್.ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿ ಕಡಬ-ಆಲಂಕಾರು ರಾಜ್ಯ ರಸ್ತೆಯಲ್ಲಿ ಕರ್ತವ್ಯದ ನಿಮಿತ್ತ ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮಾರ್ಗದ ಸಮೀಪ ಕಾಣಸಿಕ್ಕಿದ್ದಾನೆ. ಪೊಲೀಸರ ವಾಹನ ಕಂಡೊಡನೆ ವೇಗವಾಗಿ ಓಡಲು ಆರಂಭಿಸಿದಾಗ ಅನುಮಾನಗೊಂಡ ಪೊಲೀಸರು ವಾಹನ ನಿಲ್ಲಿಸಿ ಆತನನ್ನು ಬೆನ್ನಟ್ಟಿದ್ದು, ಈತ ಪಕ್ಕದ ರಸ್ತೆಯತ್ತ ಓಡಿ ಕತ್ತಲೆಯಲ್ಲಿ ಮರೆಯಾಗಿದ್ದಾನೆ.

ಪೊಲೀಸರು ಈತನನ್ನು ಬೆನ್ನಟ್ಟಿ ಅಟ್ಟಾಡಿಸಿರುವ ಘಟನೆಯ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ವಾಹನ ನಿಲ್ಲಿಸಿ ಟಾರ್ಚ್ ಬಳಸಿ ಆತನನ್ನು ಹುಡುಕುವ ಪ್ರಯತ್ನ ಮಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಂಗಡಿ, ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಕಡಬದ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣು ಇಟ್ಟಿರುವುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಪೋಲೀಸರ ರಾತ್ರಿ ಕಾರ್ಯಾಚರಣೆಗೆ ಮೆಚ್ಚುಗೆ ಪ್ರಾಪ್ತಿಯಾಗಿದೆ.

Leave a Reply

Your email address will not be published. Required fields are marked *

error: Content is protected !!