ಅರಂತೋಡಿನಲ್ಲಿ SKSSF ಸ್ಥಾಪಕ ದಿನಾಚರಣೆ.
ಸುಳ್ಯ: SKSSF ಶಾಖೆ ಅರಂತೋಡು ಇದರ ಸ್ಥಾಪಕ ದಿನಾಚರಣೆಯನ್ನು ಫೆಬ್ರವರಿ 19 ರಂದು ಆಚರಿಸಲಾಯಿತು. ಧ್ವಜಾರೋಹಣವನ್ನು ಅರಂತೋಡು ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ನೆರವೇರಿಸಿದರು. ಬಹು| ಅಲ್ ಹಾಜ್ ಇಸಾಕ್ ಬಾಖವಿ ದುವಾ ನೆರವೇರಿಸಿದರು.

ಸದರ್ ಹನೀಫ್ ದಾರಿಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಸಮಾರಂಭದಲ್ಲಿ ಸಹಾಯಕ ಅದ್ಯಾಪಕ ಸಾಜಿದ್ ಅಝ್‌ಹರಿ, ಜಮಾಅತ್ ಕಾರ್ಯದಶಿ ಕೆ. ಎಂ. ಮೂಸಾನ್, ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, SKSSF ತಾಲೂಕು ಪ್ರತಿನಿಧಿ ಜುಬೈರ್ ಎಸ್.ಇ., ಮೊಯಿದು ಕುಟ್ಟಿ, ಎ.ಇ. ಮುಸ್ತಾಫ, ಎ. ಹಮೀದ್, ಮಮ್ಮದ್, ಸಮದ್ ಕೊಡಂಕೇರಿ, ಜುನೈದ್ ಮೊದಲಾದವರಿದ್ದರು.
ಅರಂತೋಡು SKSSF ಅಧ್ಯಕ್ಷ ಆಶಿಕ್ ಬಲ್ನಾಡ್ ಸ್ವಾಗತಿಸಿ ಕಾರ್ಯದರ್ಶಿ ಮುಝಮ್ಮಿಲ್ ಕುಕ್ಕುಂಬಳ ವಂದಿಸಿದರು.




