SSF ಗಾಂಧಿನಗರ ಶಾಖೆಗೆ ವಾಕರ್ ಮತ್ತು ಹ್ಯಾಂಡ್ ಸ್ಟಿಕ್ ಹಸ್ತಾಂತರ
ಸುಳ್ಯ: ದಿನಾಂಕ 18-02-2022 ಶುಕ್ರವಾರ ರಾತ್ರಿ 09:00ಕ್ಕೆ ಸುಳ್ಯ ಸುನ್ನೀ ಸೆಂಟರ್ ನಲ್ಲಿ SSF ಗಾಂಧಿನಗರ ಶಾಖೆಗೆ ಧಾನಿಗಳ ಸಹಕಾರದಿಂದ 4 ವಾಕರ್ ಮತ್ತು ಹ್ಯಾಂಡ್ ಸ್ಟಿಕ್ ಹಸ್ತಾಂತರಿಸಿದರು,ಸುಳ್ಯ ವ್ಯಾಪ್ತಿಯಲ್ಲಿ ಜೀವ ಕಾರುಣ್ಯ ಪ್ರವರ್ತನ ಬಾಗವಗಿ ಈ ಉಪಕರಣಗಳು ಅವಶ್ಯಕತೆಯಿದ್ದಲ್ಲಿ ಸಂಘಟನಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದರು.
ಪ್ರಸ್ತುತ ಕಾರ್ಯಕ್ರಮವು ಶಾಖಾ ಅಧ್ಯಕ್ಷ ಆಬಿದ್ ಕಲ್ಲುಮುಟ್ಲು ರವರ ಅಧ್ಯಕ್ಷಯತೆಯಲ್ಲಿ ಶಾಖಾ ಪ್ರ.ಕಾರ್ಯದರ್ಶಿ ಆರಿಫ್ ಬುಶ್ರ ಸ್ವಾಗತಿಸಿ,ಮೀಡಿಯಾ ಕಾರ್ಯದರ್ಶಿ ಎಂ. ಎಸ್ ಅಶ್ರಫಿ ಉದ್ಘಾಟಿಸಿದರು, ಶಾಖಾ ಮಾಜಿ ಅಧ್ಯಕ್ಷರಾದ ಅಬ್ದುಲ್ ರಶೀದ್ ಝೈನಿ, SჄS ರಾಜ್ಯ ಸಮೀತಿ ಸದಸ್ಯ ಅಬ್ದುಲ್ ಹಮೀದ್ ಬೀಜಕೊಚ್ಚಿ ಹಾಗೂ SჄS ಸುಳ್ಯ ಬ್ರಾಂಚ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ ಕಟ್ಟೆಕ್ಕಾರ್ ಆಶಂಸ ಬಾಷಣ ಮಾಡಿದರು.
ಸುಳ್ಯ ಸೆಕ್ಟರ್ ಅಧ್ಯಕ್ಷ ಬಷೀರ್ ಕಲ್ಲುಮುಟ್ಲು, ಸುಳ್ಯ ಡಿವಿಷನ್ ಸದಸ್ಯ ಸಿದ್ದೀಕ್ ಬಿ. ಎ, ಡಿವಿಷನ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ಶಾಖಾ ಕೋಶಾಧಿಕಾರಿ ಸಿಯಾದ್ ಜಯನಗರ, ಕ್ಯಾಂಪಸ್ ಕಾರ್ಯದರ್ಶಿ ಸಲ್ಮಾನ್ ಫಾರಿಸ್, ರೈನ್ ಬೋ ಕಾರ್ಯದರ್ಶಿ ಮುಸ್ತಫಾ, ಪಬ್ಲಿಕೇಷನ್ ಕಾರ್ಯದರ್ಶಿ ಸ್ವಾದಿಕ್ ಪಿ.ಜಿ, ವಿಸ್ಡಂ ಕಾರ್ಯದರ್ಶಿ ಅಬ್ದುಲ್ ನಾಫಿ, ಕಮಾಲ್ ಎ.ಬಿ, ಮಾಫಾಝ್, ಅಶ್ರಫ್, ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.




