ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಸ್ಥಾಪಕ ದಿನ
ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಸ್ಥಾಪಕ ದಿನವಾದ ಇಂದು
ಪೇರಡ್ಕ ಮದರಸದಲ್ಲಿ ಧ್ವಜಾರೋಹಣ ನಡೆಯಿತು ಪೇರಡ್ಕ ಖತೀಬರಾದ ರಿಯಾದ್ ಫೈಝಿ ದುವಾ ನೆರವೇರಿಸಿ ಸಂಘಟನೆಯ ಮಹತ್ವವನ್ನು ವಿವರಿಸಿದರು ಜಮಾಅತಿನ ಗೌರವಾದ್ಯಕ್ಷರಾದ ಟಿ. ಎಂ ಶಹೀದ್ ಧ್ವಜಾರೋಹಣ ನೆರವೇರಿಸಿದರು ಶಾಖೆಯ ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸ್ವಾಗತ ಮಾಡಿ ಅದ್ಯಕ್ಷರಾದ ಸಾಜಿದ್ ಅಝ್ಅರಿ ಅಧ್ಯಕ್ಷತೆ ವಹಿಸಿದರು ಗ್ರಾಮ ಪಂಚಾಯತ್ ಅದ್ಯಕ್ಷರಾದ ಜಿ. ಕೆ ಹಮೀದ್ ಜಮಾಅತ್ ಕಾರ್ಯದರ್ಶಿ ರಝಾಕ್ ಹಾಜಿ ಗೂನಡ್ಕ ಶಾಖೆಯ ಸಂಘಟನಾ ಕಾರ್ಯದರ್ಶಿ ಇರ್ಫಾನ್ ಪೇರಡ್ಕ ಹಕೀಂ ದರ್ಕಾಸ್ ಅರಂತೊಡು ಜಮಾಅತ್ ಕಾರ್ಯದರ್ಶಿ ಕೆ ಎಂ ಮೂಸಾನ್ ಉಪಸ್ಥಿತರಿದ್ದರು.

ಹಿಜಾಬ್ ಕುರಿತು ಪ್ಲೇ ಕಾರ್ಡ್ ಪ್ರದರ್ಶನ ಮಾಡಲಾಯಿತು. ಸಹ ಅದ್ಯಾಪಕರಾದ ನೂರುದ್ದೀನ್ ಅನ್ಸಾರಿ ಕೃತಜ್ಞತೆ ಸಲ್ಲಿಸಿದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.





