ವಿಟ್ಲ: ಹಿಜಾಬ್ ಧರಿಸಿ ತರಗತಿ ತೆರಳಲು ಪ್ರಾಂಶುಪಾಲರಿಂದ ಅವಕಾಶ ನಿರಾಕರಣೆ: ತರಗತಿ ಹಾಜರಾಗದೇ ಮನೆಗೆ ಹಿಂತಿರುಗಿದ 11 ವಿದ್ಯಾರ್ಥಿಗಳು
ವಿಟ್ಲ: ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡದ ಕಾರಣ 11 ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಮನೆಗೆ ಹಿಂತಿರುಗಿದ ಘಟನೆ ವಿಟ್ಲದಲ್ಲಿ ನಡೆದಿದೆ.
ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 11 ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ತರಗತಿಗೆ ಹೋಗಲು ಮುಂದಾಗಿದ್ದರು. ಆದರೆ ಪ್ರಾಂಶುಪಾಲರು ಹಿಜಾಬ್ ಧರಿಸಿ, ತರಗತಿ ಒಳಗಡೆ ಹೋಗಬಾರದು, ಈ ಬಗ್ಗೆ ನ್ಯಾಯಾಲಯದ ಆದೇಶ ಕೂಡ ಇದೆ ಎಂದಿದ್ದಾರೆ. ಲೇಡಿಸ್ ಕೋಣೆಯಲ್ಲಿ ಕಳಚಿಟ್ಟು ಬಳಿಕ ತರಗತಿ ಹೋಗಬೇಕು ಎಂದು ಪ್ರಾಂಶುಪಾಲರು ತಿಳಿಸಿದ್ದರಿಂದ ವಿದ್ಯಾರ್ಥಿಗಳು ನೇರವಾಗಿ ಮನೆಗೆ ತೆರಳಿದ್ದಾರೆ.




